ನ್ಯೂಸ್

'ಟೋನಿ' ನಟಿ ಪ್ರೀತಿ ಜಾಂಗಿಯಾನಿ ಪತಿ​​ಗೆ ಕಾರು ಅಪಘಾತ; ಐಸಿಯುನಲ್ಲಿ ಚಿಕಿತ್ಸೆ

ಮುಂಬೈ: ಸ್ಯಾಂಡಲ್​ವುಡ್​ ನಟ ಶ್ರೀನಗರ ಕಿಟ್ಟಿ ಜತೆ ಟೋನಿ ಹಾಗೂ ಉಪೇಂದ್ರ ಜತೆ ಓಂಕಾರ ಚಿತ್ರದಲ್ಲಿ ನಟಿಸಿದ್ದ ಪ್ರೀತಿ ಜಾಂಗಿಯಾನಿ ಅವರ ಪತಿ ಪರ್ವಿನ್ ದಾಬಾಸ್​ ಅವರಿಗೆ ಅಪಘಾತ ಸಂಭವಿಸಿದೆ.

ಶನಿವಾರ ಬೆಳಗ್ಗೆ ಪರ್ವೀನ್ ದಬಾಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೂಡಲೇ ಅವರನ್ನು ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಪರ್ವೀನ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪರ್ವೀನ್ ಪ್ರೊ ಪಂಜಾ ಲೀಗ್ ಕಂ ಸಂಸ್ಥಾಪಕರೂ ಆಗಿದ್ದಾರೆ. ಪರ ಪಂಜಾ ಲೀಗ್ ಸದಸ್ಯರು ಪರ್ವೀನ್ ದಾಬಾಸ್ ಅಪಘಾತದ ಬಗ್ಗೆ ಮಾತನಾಡುತ್ತಾ, ಪ್ರಸ್ತುತ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಾವು ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

ಪತಿಗೆ ಅಪಘಾತವಾಗಿದೆ ಎಂದು ತಿಳಿದ ಪ್ರೀತಿ ಜಾಂಗಿಯಾನಿ ತಕ್ಷಣ ಆಸ್ಪತ್ರೆಗೆ ತೆರಳಿದರು. ಅವರ ಕುಟುಂಬ ಸದಸ್ಯರು, ಪ್ರೊ ಪಂಜಾ ಲೀಗ್ ಸದಸ್ಯರು ಪ್ರಸ್ತುತ ಆಸ್ಪತ್ರೆಯಲ್ಲಿದ್ದಾರೆ. ಅಭಿಮಾನಿಗಳು, ಅನೇಕ ಆಪ್ತರು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಪ್ರೀತಿ ಜಾಂಗಿಯಾನಿ ಅವರು ಬಾಲಿವುಡ್ ನಟ ಹಾಗೂ ನಿರ್ದೇಶಕ ಪರ್ವೀನ್ ದಬಾಸ್ ಅವರನ್ನು ಪ್ರೀತಿಸಿ ಮದುವೆಯಾಗಿ ಸಿನಿಮಾಗಳಿಂದ ದೂರ ಉಳಿಸಿದ್ದಾರೆ.