ನ್ಯೂಸ್

ಆ ಭಯ ಇರಬೇಕು; ಮಾಜಿ ಸಿಎಂ ಸಿದ್ದರಾಮಯ್ಯರನ್ನು ಟೀಕಿಸಿದ ಸಂಸದ ಪ್ರತಾಪ್​ ಸಿಂಹ

Webdesk - Manjunatha B

ಮೈಸೂರು: ರಾಜ್ಯ ವಿಧಅನಸಭೆ ಚುನಾವಣ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಈ ಮಧ್ಯೆ ಪಕ್ಷದ ಅಭ್ಯರ್ಥಿಗಳು ಪರಸ್ಪರ ಕಾಲೆಳೆಯುವುದರಲ್ಲಿ ನಿರತರಾಗಿದ್ದಾರೆ.

ಇನ್ನು ಸಚಿವ ಸೋಮಣ್ಣ ಪರ ವರುಣಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿಡಿಕೊಂಡಿರುವ ಸಂಸದ ಪ್ರತಾಪ್​ ಸಿಂಹ ಸರಣಿ ಟ್ವೀಟ್​ ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ಉ ಛೇಡಿಸಿದ್ಧಾರೆ.

ಆ ಭಯ ಇರಬೇಕು

ವರುಣಾದಲ್ಲೇ ಚುನಾವಣೆ ನಿಲ್ಲುವುದಾಗಿಯೂ ಹಾಗು ನಾಮಪತ್ರ ಸಲ್ಲಿಸಲಷ್ಟೇ ಬರುತ್ತೇನೆ ಎಂದು ಹೇಳಿಹೋಗಿದ್ದ ಸಿದ್ದರಾಮಯ್ಯನವರು ಸೋಮಣ್ಣನವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ನಾಮಪತ್ರ ಸಲ್ಲಿಸಲು 2 ದಿನ ಮೊದಲೇ ಓಡಿಬಂದರು, ಇವತ್ತು ಮತ್ತೆ ಬಂದಿದ್ದಾರೆ, ಮುಂದಿನವಾರ ಇಲ್ಲೇ ಇರುತ್ತಾರಂತೆ! ಭಯ! ಆ ಭಯ ಇರಬೇಕು ಸಿದ್ದರಾಮಯ್ಯನವರೆ! ಎಂದು ಟೀಕಿಸಿದ್ಧಾರೆ.

ಏನು ಕೊಟ್ಟಿದ್ದಾರೆ ಅಂತ ಕೇಳ್ತೀರಾ

ವಿ. ಸೋಮಣ್ಣ ವರುಣಾಕ್ಕೆ ಏನು ಕೊಟ್ಟಿದ್ದಾರೆ, ಏನು ಕೊಟ್ಟಿದ್ದಾರೆ ಅಂತ ಕೇಳ್ತೀರಾ 2022-23ರ ಸಾಲಿನಲ್ಲಿ ಒಂದೇ ವರ್ಷಕ್ಕೆ 2 ಸಾವಿರ ಹೆಚ್ಚುವರಿ ಮನೆಗಳನ್ನು ವರುಣಾದ ದಲಿತ ಬಂಧುಗಳಿಗೆ ನೀಡಿದ್ದಾರೆ ಎಂದು ಸರಣಿ ಟ್ವೀಟ್​ಗಳನ್ನು ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿದ್ದಾರೆ.