ನ್ಯೂಸ್

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಆರೋಗ್ಯ ಇನ್ನಷ್ಟು ಕ್ಷೀಣ

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿಯವರ ಆರೋಗ್ಯ ಸ್ಥಿತಿ ಇನ್ನಷ್ಟು ಕ್ಷೀಣಿಸಿದೆ. ಈಗಾಗಲೇ ಕೋಮಾದಲ್ಲಿರುವ ಪ್ರಣಬ್​ ಅವರ ಮೂತ್ರಪಿಂಡದ ನಿಯತಾಂಕಗಳು ನಿನ್ನೆಯಿಂದ ಇನ್ನಷ್ಟು ದುರ್ಬಲಗೊಂಡಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಆಗಸ್ಟ್​ 10ರಂದು ದೆಹಲಿಯ ಆರ್ಮಿ ರಿಸರ್ಚ್​ ಆ್ಯಂಡ್​ ರೆಫೆರಲ್​ ಆಸ್ಪತ್ರೆಗೆ ದಾಖಲಾಗಿರುವ ಪ್ರಣಬ್​ ಮುಖರ್ಜಿಯವರಿಗೆ ಮಿದುಳಿನ ಸರ್ಜರಿ ಆಗಿದೆ. ಅಷ್ಟೇ ಅಲ್ಲ ಅವರಲ್ಲಿ ಕರೊನಾ ವೈರಸ್​ ಕೂಡ ದೃಢಪಟ್ಟಿದ್ದು, ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಾರೆ. ಆದರೆ ನಿನ್ನೆಯಿಂದ ಮೂತ್ರಪಿಂಡದ ನಿಯತಾಂಕವೂ ಇನ್ನಷ್ಟು ದುರ್ಬಲಗೊಂಡಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್​)