ಅಮರಾವತಿ: ತಿರುಮಲ ಲಡ್ಡು ಪ್ರಸಾದಕ್ಕೆ ಜಗನ್ ಮುಖ್ಯಮಂತ್ರಿಯಾಗಿದ್ದಾಗ ಹಸು, ಹಂದಿಕೊಬ್ಬು, ನೀನಿನ ಎಣ್ಣೆ ಮಿಶ್ರಿತ ಕಲಬೆರಕೆ ತುಪ್ಪ ಸರಬರಾಜು ಮಾಡಿದ ವಿವಾದದ ಕುರಿತು ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮಾಡಿದ ಆರೋಪಗಳಿಗೆ ನಟ ಪ್ರಕಾಶ್ ರಾಜ್ ವಿವಾದಾತ್ಮಕ ಸರಣಿ ಪೋಸ್ಟ್‌ಗಳನ್ನು ಮಾಡುತ್ತಿದ್ದು, ತಿಮ್ಮಪ್ಪನ ಭಕ್ತರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. Prakash Raj Vs Pawan Kalyan
ಇದನ್ನೂ ಓದಿ: Tirupati Laddu Row: ದೇಗುಲಗಳಿಗೆ ಆ ಸಂಸ್ಥೆ ತುಪ್ಪ ಮಾತ್ರ ಖರೀದಿ- ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರ!
ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನಟ ಪ್ರಕಾಶ್ ರಾಜ್, 'ಜಸ್ಟ್ ಆಸ್ಕಿಂಗ್' ಎಂಬ ಪೋಸ್ಟ್ ವೈರಲ್ ಆಗುತ್ತಿದೆ. ಸರಣಿ ಟ್ವೀಟ್‌ಗಳ ಮೂಲಕ ಆತ ಅನಗತ್ಯವಾಗಿ ಪವನ್ ಕಲ್ಯಾಣ್ ಅವರನ್ನು ಪ್ರಶ್ನಿಸುತ್ತಿದ್ದು, ಪವನ್ ಅಭಿಮಾನಿಗಳು ಮತ್ತು ತಿಮ್ಮಪ್ಪನ ಭಕ್ತರು ನಟನ ಈ ನಡೆಗೆ ಕಿಡಿಕಾರುತ್ತಿದ್ದಾರೆ.
ಇತ್ತೀಚೆಗೆ ಪವನ್ ಬಳಿ ಕಾರ್ತಿಕ್ ಕ್ಷಮೆ ಯಾಚಿಸಿದ ಸಂದರ್ಭದಲ್ಲಿ, 'ಮಾಡದ ತಪ್ಪಿಗೆ ಕ್ಷಮೆ ಕೇಳುವುದರಲ್ಲಿ ಏನು ಸಂತೋಷವಿದೆ?' ಎಂದು ಪ್ರಶ್ನಿಸಿದ್ದ ಪ್ರಕಾಶ್ ರಾಜ್ ಪೋಸ್ಟ್ ವೈರಲ್ ಆಗಿತ್ತು. ಈಗ ಆತ ಮಾಡಿರುವ ಮತ್ತೊಂದು ಟ್ವೀಟ್ ಚರ್ಚೆಗೆ ಗ್ರಾಸವಾಗಿದೆ.
ಗೆಲ್ಲುವ ಮುನ್ನ ಒಂದು ಅವತಾರ, ಗೆದ್ದ ನಂತರ ಮತ್ತೊಂದು ಅವತಾರ, ಏನಿದು ಸಮಸ್ಯೆ? ಯಾಕೆ ಗೊಂದಲದಲ್ಲಿದ್ದೇವೆ? ಯಾವುದು ನಿಜ? ಎಂದು ಪ್ರಕಾಶ್‌ರಾಜ್ ಟ್ವೀಟ್ ಮಾಡಿ ಪವನ್ ತಿಮ್ಮಪ್ಪ ಸನ್ನಧಾನದಲ್ಲಿ ಕೈಗೊಂಡಿರುವ ಪ್ರಾಯಶ್ಚಿತ್ತ ದೀಕ್ಷೆ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದು ಮತ್ತೆ ಹಿರಿಯ ನಟನ ಪೋಸ್ಟ್ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಪ್ರಕಾಶ್ ರಾಜ್ ವಿದೇಶದಲ್ಲಿದ್ದು, ಅಲ್ಲಿಂದಲೇ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.