ನ್ಯೂಸ್

ಅನುಷ್ಕಾ & ಪ್ರಭಾಸ್​​ ಮದುವೆ ರೂಮರ್ಸ್​​​​; ಡಾರ್ಲಿಂಗ್​​ ಕೊಟ್ಟ ಸ್ಪಷ್ಟನೆ ಹೀಗಿದೆ.. | Prabhas

ಹೈದರಾಬಾದ್​​​; ಟಾಲಿವುಡ್​​​​ನಲ್ಲಿ ಮೋಸ್ಟ್​​ ಎಲಿಜಿಬಲ್​ ಬ್ಯಾಚುಲರ್​ ಯಾರು ಎಂದರೆ ಎಲ್ಲರಿಗೂ ಥಟ್​ ಅಂತಾ ನೆನಪಿಗೆ ಬರೋದೆ ಪ್ಯಾನ್​ ಇಂಡಿಯಾ ಸ್ಟಾರ್ ಹೀರೋ ಪ್ರಭಾಸ್( Prabhas). ಡಾರ್ಲಿಂಗ್​ ಪ್ರಭಾಸ್​ ಮದುವೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮದುವೆ ಕುರಿತು ಪ್ರಭಾಸ್​​ ಅವರಿಂದ ಯಾವುದೇ ನಿಖರ ಉತ್ತರ ಬರದಿದ್ದರು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಪ್ರಭಾಸ್​ ಮದುವೆಯಾಗುವ ಹುಡುಗಿ ಇವರೇ ಎಂದು ಸುದ್ದಿಗಳು ಹರಿದಾಡುತ್ತಿರುತ್ತವೆ.

ಪ್ರಭಾಸ್​ ವಿವಾಹದ ರೂಮರ್ಸ್​ನಲ್ಲಿ ಅನುಷ್ಕಾದಿಂದ ಹಿಡಿದು ಇತ್ತೀಚೆಗಷ್ಟೇ ಕೃತಿ ಸನನ್ ವರೆಗೆ ಹಲವು ನಾಯಕಿಯರ ಹೆಸರು ತಳುಕು ಹಾಕಿಕೊಂಡಿದೆ. ಪ್ರಭಾಸ್​ ಮತ್ತು ಅನುಷ್ಕಾ ಹಿಟ್​ ಆ್ಯಂಡ್​ ಕ್ಯೂಟ್​ ಜೋಡಿ. ಬಿಲ್ಲಾ’, ‘ಮಿರ್ಚಿ’ ಮತ್ತು ‘ಬಾಹುಬಲಿ’ ಎರಡು ಭಾಗಗಳಲ್ಲಿಯೂ ಒಟ್ಟಿಗೆ ನಟಿಸಿದ್ದಾರೆ. ಇವರಿಬ್ಬರ ಬಾಂಧವ್ಯ ನೋಡಿ ಇಬ್ಬರೂ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂಬ ವದಂತಿ ವೈರಲ್​ ಆಗಿದೆ. ಅನುಷ್ಕಾರೊಂದಿಗಿನ ಲವ್​​ ಕಹಾನಿ ಸ್ಟೋರಿಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಕೊನೆಗೂ ಪ್ರಭಾಸ್​ ಉತ್ತರಿಸಿದ್ದಾರೆ.

ನನ್ನ ಮತ್ತು ಅನುಷ್ಕಾ ಮಧ್ಯೆ ಮದುವೆ ಅಥವಾ ಲವ್​​ ಇದೆರೆಡರಲ್ಲಿ ಯಾವುದೇ ಸಂಬಂಧವಿದ್ದರೂ ನಾವು ಅದನ್ನು 2 ವರ್ಷಗಳ ಕಾಲ ಮರೆಮಾಚಲು ಸಾಧ್ಯವಾಗುವುದಿಲ್ಲ. ಸಿನಿಮಾರಂಗದಲ್ಲಿರುವ ನಮ್ಮ ಬಗ್ಗೆ ಇಡೀ ಜಗತ್ತಿಗೆ ಪರಿಚಯವಿದೆ. ಹಾಗೇ ಮರೆಮಾಚಲು ಸಾಧ್ಯವಾಗುವುದಿಲ್ಲ ಮತ್ತು ಅದನ್ನು ಮುಚ್ಚಿಡಬೇಕು ಎಂಬುದು ಏನಿಲ್ಲ. ಅದು ನನ್ನ ವೈಯಕ್ತಿಕ ವಿಚಾರ, ಯಾಕೆ ಮರೆಮಾಚಬೇಕು. ನನ್ನ ಪ್ರಕಾರ ನನ್ನ ಮದುವೆ ಅಥವಾ ಇವರೇ ನಾನು ಮದುವೆಯಾಗುವ ಹುಡುಗಿ ಎಂದು ತೋರಿಸುವವರೆಗೂ ಹೀಗೆಯೇ ಹೇಳುತ್ತಿರುತ್ತಾರೆ ಎಂದೆನ್ನಿಸುತ್ತದೆ ಎಂದು ಹೇಳಿದರು.

ಇದೇ ಸಮಯದಲ್ಲಿ ಶೀಘ್ರದಲ್ಲೇ ಮದುವೆಯಾಗುವೆ ಅದು ಲವ್​ ಮ್ಯಾರೇಜ್​ ಎಂದು ಹೇಳಿದ್ದೀರಿ ಎಂದು ಪ್ರಭಾಸ್​ ಅವರನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಪ್ರಭಾಸ್​​ ಶೀಘ್ರದಲ್ಲಿ ಅಂತಾ ಹೇಳಿಲ್ಲ.. ಅರೆಂಜ್​ ಮ್ಯಾರೇಜ್​ ಅಥವಾ ಲವ್​ ಮ್ಯಾರೇಜ್​ ಎಂದು ಕೇಳಿದ್ದಕ್ಕೆ ಲವ್​ ಮ್ಯಾರೇಜ್​​​ ಎಂದು ಹೇಳಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ. ಪ್ರಭಾಸ್​​ ಸಲಾರ್ ಮತ್ತು ಕಲ್ಕಿ 2898 ADಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವರು ಮುಂದಿನ ಸಿನಿಮಾಗಳಾದ ರಾಜಾಸಾಬ್ ಮತ್ತು ಫೌಜಿ ಅಭಿಮಾನಿಗಳು ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿವೆ.(ಏಜೆನ್ಸೀಸ್​)