Earthquake: ದಕ್ಷಿಣ ಅಮೆರಿಕಾ ಮತ್ತು ಅಂಟಾರ್ಕ್ಟಿಕಾ ನಡುವೆ ಇರುವ ಡ್ರೇಕ್ ಪ್ಯಾಸೇಜ್‌ನಲ್ಲಿ ಶನಿವಾರ (ಅಕ್ಟೋಬರ್ 11, 2025) ಮುಂಜಾನೆ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಭಾರತೀಯ ಸಮಯ (IST) ಬೆಳಗಿನ ಜಾವ 1:59 ಕ್ಕೆ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಕೇಂದ್ರಬಿಂದು ಸಮುದ್ರ ಮಟ್ಟಕ್ಕಿಂತ ಸುಮಾರು 10 ಕಿಲೋಮೀಟರ್ ಕೆಳಗೆ ಇತ್ತು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ಹೊಸ ಉದ್ಯಮ ಆರಂಭಿಸಿದ ಸಚಿನ್ ತೆಂಡುಲ್ಕರ್; ಕ್ರೀಡಾ ಉಡುಪು, ಶೂ ಬ್ರ್ಯಾಂಡ್ ‘ಟೆನ್ ಎಕ್ಸ್ ಯು’ ಆರಂಭ
ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಪ್ರಕಾರ, ಭೂಕಂಪವು ಸುಮಾರು 10 ಕಿಲೋಮೀಟರ್ ಆಳದಲ್ಲಿತ್ತು. ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಮತ್ತು ಚಿಲಿಯ ಕಡಲ ಪ್ರಾಧಿಕಾರ SHOA ಆರಂಭದಲ್ಲಿ ಸಂಭಾವ್ಯ ಸುನಾಮಿಯ ಬಗ್ಗೆ ಎಚ್ಚರಿಕೆ ನೀಡಿತ್ತು ಎಂದು ಹೇಳಿದೆ.
ಶುಕ್ರವಾರ (ಅಕ್ಟೋಬರ್ 10, 2025) ಫಿಲಿಪೈನ್ಸ್ ಸಮುದ್ರದಲ್ಲಿ ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ ದಾಖಲಾಗಿದೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.(ಏಜೆನ್ಸೀಸ್)