ನ್ಯೂಸ್

ಗ್ರೀಸ್​ನಲ್ಲಿ 6.0 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ ಕೊಟ್ಟ ಜರ್ಮನ್ ರಿಸರ್ಚ್ ಸೆಂಟರ್! | Earthquake

Earthquake: ಗ್ರೀಸ್​ನ ಕ್ರಿಟ್​ ಕರಾವಳಿಯಲ್ಲಿ ಇಂದು 6.0 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸಸ್ ಪ್ರಕಾರ, ಭೂಕಂಪವು ಇದೀಗ ಯುರೋಪಿಯನ್ ರಾಷ್ಟ್ರಕ್ಕೆ ಸುನಾಮಿ ಭೀತಿಯನ್ನು ಹುಟ್ಟುಹಾಕಿದೆ ಎಂದು ವರದಿಯಾಗಿದೆ.

GFZ ಪ್ರಕಾರ, ಭೂಕಂಪವು 77 ಕಿ.ಮೀ ಆಳದಲ್ಲಿ ಸಂಭವಿಸಿದೆ. ಗ್ರೀಸ್‌ನ ಭೂಚಲನಶಾಸ್ತ್ರ ಸಂಸ್ಥೆಯ ಪ್ರಕಾರ, ಭೂಕಂಪವು 6.1 ತೀವ್ರತೆಯಲ್ಲಿತ್ತು. ಆದರೆ, ESMC ಭೂಕಂಪದ ತೀವ್ರತೆ 6.3 ಎಂದು ದಾಖಲಾಗಿದೆ ಎಂದು ಹೇಳಿದೆ.

ಗ್ರೀಸ್‌ನಲ್ಲಿ ಸರಣಿ ಭೂಕಂಪಗಳು

ಕಳೆದ ವಾರ, ಗ್ರೀಸ್ ತನ್ನ ದಕ್ಷಿಣ ಕರಾವಳಿಯಲ್ಲಿ ಸರಣಿ ಪ್ರಬಲ ಭೂಕಂಪಗಳು ಸಂಭವಿಸಿದ ನಂತರ ಇದೇ ರೀತಿಯ ಎಚ್ಚರಿಕೆಯನ್ನು ನೀಡಲಾಗಿತ್ತು. ಬಳಿಕ ಮೇ.13ರಂದು, ಕಾಸೋಸ್ ದ್ವೀಪದ ಬಳಿ 6.1 ತೀವ್ರತೆಯ ಭೂಕಂಪ ಸಂಭವಿಸಿತು, ಇದು ದಕ್ಷಿಣ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆಯನ್ನು ಕೂಡ ನೀಡತ್ತು.

ಆದಾಗ್ಯೂ, ಗ್ರೀಸ್‌ನ ತುರ್ತು ಸೇವೆಗಳ ಪ್ರಕಾರ, ಭೂಕಂಪದ ತೀವ್ರತೆ 5.9 ರಷ್ಟಿತ್ತು. ಭೂಕಂಪದ ಪ್ರಬಲ ಸ್ವರೂಪದಿಂದಾಗಿ, ನೆರೆಯ ರಾಷ್ಟ್ರಗಳಾದ ಟರ್ಕಿ, ಲೆಬನಾನ್, ಈಜಿಪ್ಟ್ ಮತ್ತು ಇಸ್ರೇಲ್‌ಗಳಲ್ಲಿಯೂ ಕಂಪನದ ಅನುಭವವಾಗಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)