ನ್ಯೂಸ್

ಸಿದ್ದರಾಮಯ್ಯ ಸಂಪುಟ ಸೇರಲಿರುವ ಸಚಿವರ ಪಟ್ಟಿ ಇಲ್ಲಿದೆ ನೋಡಿ…

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಯಾರು ಎಂಬ ಕುತೂಹಲದ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಎರಡನೇ ಬಾರಿಗೆ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಮಧ್ಯೆ, ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿ ಯಾರೆಲ್ಲಾ ಶಾಸಕರು ಸಚಿವರಾಗಿ ಭಡ್ತಿ ಹೊಂದಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಸಿಎಂ ಯಾರಾಗಬೇಕು ಎಂಬ ಬಿಕ್ಕಟ್ಟು ಬಗೆ ಹರಿಯುತ್ತಿದ್ದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್​ನ ಕೆಲ ಪ್ರಮುಖ ನಾಯಕರು ನೂತನ ಸಚಿವರ ಪಟ್ಟಿ ಸಿದ್ದಪಡಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯನ್ನು ಗುರಿಯಾಗಿಸಿಕೊಂಡು ಸಮರ್ಥವಾದ ಸಂಪುಟ ರಚನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಹಾಗೆಯೇ ಯಾವುದೇ ಸಮುದಾಯಕ್ಕೂ ಅಸಮಾಧಾನ ಉಂಟಾಗದಂತೆ ಕೆಲ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ಜತೆಗೆ ಯುವ ಶಾಸಕರನ್ನೂ ಸಚಿವ ಸ್ಥಾನಕ್ಕೆ ಪರಿಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಸಂಪುಟದಲ್ಲಿರುವ ಸಂಭವನೀಯ ಸಚಿವರು ಯಾರ್ಯಾರು?

  • ಡಾ.ಜಿ.ಪರಮೇಶ್ವರ್
  • ಬಿ.ಕೆ. ಹರಿಪ್ರಸಾದ್
  • ರಾಮಲಿಂಗಾರೆಡ್ಡಿ
  • ಜಮೀರ್ ಅಹ್ಮದ್ ಖಾನ್
  • ಎಂ.ಬಿ.ಪಾಟೀಲ್
  • ಯು.ಟಿ ಖಾದರ್
  • ಶಿವಾನಂದ ಪಾಟೀಲ್
  • ಈಶ್ವರ ಖಂಡ್ರೆ
  • ಶರಣ ಪ್ರಕಾಶ್ ಪಾಟೀಲ್
  • ಶರಣಬಸಪ್ಪ ದರ್ಶನಾಪೂರ
  • ರಾಘವೇಂದ್ರ ಹಿಟ್ನಾಳ್
  • ಸತೀಶ್ ಜಾರಕಿಹೊಳಿ
  • ಲಕ್ಷ್ಮಿ ಹೆಬ್ಬಾಳ್ಕರ್
  • ಲಕ್ಷ್ಮಣ ಸವದಿ
  • ಪ್ರಿಯಾಂಕ ಖರ್ಗೆ
  • ಕೃಷ್ಣ ಬೈರೇಗೌಡ
  • ಕೆ.ಎಚ್.ಮುನಿಯಪ್ಪ
  • ಬಿ.ನಾಗೇಂದ್ರ
  • ಮಧು ಬಂಗಾರಪ್ಪ
  • ಎಸ್.ಎಸ್.ಮಲ್ಲಿಕಾರ್ಜುನ
  • ಎನ್.ಎಸ್ ಬೋಸ ರಾಜ್
  • ಶಿವಲಿಂಗೇಗೌಡ
  • ತನ್ವೀರ್ ಸೇಠ್

ಸಂಭವನೀಯ ಸ್ಪೀಕರ್

  • ಎಚ್.ಕೆ.ಪಾಟೀಲ್
  • ಟಿ.ಬಿ.ಜಯಚಂದ್ರ
  • ಆರ್.ವಿ.ದೇಶಪಾಂಡೆ