ನ್ಯೂಸ್

ಪೋರ್ನೋಗ್ರಫಿ ಕೇಸ್​: ಮಾಡೆಲ್​ ಗೆಹನಾ ವಸಿಷ್ಠ್​ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್​

ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್​ ಕುಂದ್ರ ಬಂಧನಕ್ಕೊಳಗಾಗಿರುವ ಪೋರ್ನೋಗ್ರಫಿ ಕೇಸಿಗೆ ಸಂಬಂಧಿಸಿದಂತೆ ಪ್ರಸಿದ್ಧ ಮಾಡೆಲ್​ ಗೆಹನಾ ವಸಿಷ್ಠ್​ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್​ ಕೋರ್ಟ್​ ತಿರಸ್ಕರಿಸಿದೆ.

ಮಾಲ್ವಾನಿ ಪೊಲೀಸ್​ ಠಾಣೆಯಲ್ಲಿ ಗೆಹನಾ ವಿರುದ್ಧ ಸಲ್ಲಿಸಲಾಗಿದ್ದ ಎಫ್​ಐಆರ್​ಅನ್ನು ಇತ್ತೀಚೆಗೆ ರಾಜ್​ ಕುಂದ್ರ ಪೋರ್ನೋಗ್ರಫಿ ಕೇಸ್​ ತನಿಖೆ ನಡೆಸುತ್ತಿರುವ ಮುಂಬೈ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಗೆಹನಾ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಮುಂಬೈ ಕೋರ್ಟ್​, ಗೆಹನಾಗೆ ಜಾಮೀನು ನೀಡಲು ನಿರಾಕರಿಸಿದೆ.

ನೀಲಿ ಸಿನಿಮಾಗಳನ್ನು ಮಾಡಿ ಅವುಗಳನ್ನು ಬೇರೆ ಬೇರೆ ಆ್ಯಪ್​ಗಳಲ್ಲಿ ಅಪ್​ಲೋಡ್​ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ರಾಜ್​ ಕುಂದ್ರ ಪರವಾಗಿ ಗೆಹನಾ, ಈ ಹಿಂದೆ ಟ್ವಿಟರ್ ಮೂಲಕ ಮಾತನಾಡಿದ್ದರು. ಕುಂದ್ರ ಪೋರ್ನ್ ವಿಡಿಯೋ ತಯಾರು ಮಾಡುತ್ತಿರಲಿಲ್ಲ. ಇದು ಎರಾಟಿಕಾ. ಪೋರ್ನ್ ವಿಡಿಯೋಗಳ ಜತೆ ಎರಾಟಿಕಾ ವಿಡಿಯೋಗಳನ್ನು ಸೇರಿಸಬೇಡಿ. ಈ ರೀತಿಯ ವಿಡಿಯೋಗಳೇ ಬೇರೆ. ಇದನ್ನು ಪೊಲೀಸರು ತಪ್ಪು ಅರ್ಥ ಮಾಡಿಕೊಂಡಿದ್ದಾರೆ ಎಂದು ಗೆಹನಾ ಸಮಜಾಯಿಷಿ ಕೊಟ್ಟಿದ್ದರು. (ಏಜೆನ್ಸೀಸ್)