ನ್ಯೂಸ್

ಶಿಕ್ಷಕರಿಗೆ 7,000 ರಾಖಿಗಳನ್ನು ಕಟ್ಟಿದ ವಿದ್ಯಾರ್ಥಿಗಳು!

ಪಾಟ್ನಾ: ನಮ್ಮ ಸಂಪ್ರದಾಯದಲ್ಲಿ ರಾಖಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಮಂಗಳಕರ ದಿನದಂದು, ಸಹೋದರಿಯರು ತಮ್ಮ ಬಾಂಧವ್ಯವನ್ನು ಬಲಪಡಿಸಲು ತಮ್ಮ ಸಹೋದರರಿಗೆ ರಾಖಿಗಳನ್ನು ಕಟ್ಟುತ್ತಾರೆ. ರಕ್ಷಾ ಬಂಧನದ ಸಂದರ್ಭದಲ್ಲಿ, ಜನಪ್ರಿಯ ಆನ್‌ಲೈನ್ ಬೋಧಕ, ಪಾಟ್ನಾದ ಖಾನ್ ಸರ್​ಗೆ ವಿದ್ಯಾರ್ಥಿಗಳು ಸುಮಾರು 7,000 ರಾಖಿಗಳನ್ನು ಕಟ್ಟಿದ್ದಾರೆ.

ಜನಪ್ರಿಯ ಶಿಕ್ಷಣತಜ್ಞ ಪಾಟ್ನಾದ ಖಾನ್ ಸರ್ ತಮ್ಮ ಕೋಚಿಂಗ್ ಸೆಂಟರ್‌ನಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜಿಸಿದ್ದರು, ಇದರಲ್ಲಿ ವಿವಿಧ ಬ್ಯಾಚ್‌ಗಳಿಂದ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಮಾರು 7,000 ಹುಡುಗಿಯರು ಸರ್​​ಗೆ ರಾಖಿಗಳನ್ನು ಕಟ್ಟಿದರು.

ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿದ್ದರೂ ಅಪಾರ ಸಂಖ್ಯೆಯಲ್ಲಿ ಸೇರಿದ್ದರಿಂದ ಎಲ್ಲರಿಗೂ ರಾಖಿ ಕಟ್ಟಲು ಸಾಧ್ಯವಾಗಿಲ್ಲ. ಸುಮಾರು ಎರಡೂವರೆ ಗಂಟೆಗಳ ಕಾಲ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 7,000 ವಿದ್ಯಾರ್ಥಿನಿಯರು ಅವರ ಕೈಗೆ ರಾಖಿಗಳನ್ನು ಕಟ್ಟಿದರು ಮತ್ತು ಇದು ಹಿಂದೆಂದೂ ಸಂಭವಿಸದ ವಿಶ್ವ ದಾಖಲೆಯಾಗಿದೆ ಎಂದು ಖಾನ್ ಸರ್ (ಶಿಕ್ಷಕ) ಹೇಳಿದ್ದಾರೆ.

ಕಾರ್ಯಕ್ರಮದ ನಂತರ ಮಾತನಾಡಿದ ಅವರು, ನನಗೆ ಸ್ವಂತ ಸಹೋದರಿಯರು ಇಲ್ಲ. ಹೀಗಾಗಿ ವಿದ್ಯಾರ್ಥಿನಿಯರೇ ನನಗೆ ಸಹೋದರಿಯರೆಂದು ಭಾವಿಸಿ ಪ್ರತಿ ವರ್ಷ ರಾಖಿ ಕಟ್ಟುತ್ತಾರೆ. ತರಗತಿಗಳನ್ನು ಕೇಳಲು ವಿವಿಧ ಸ್ಥಳಗಳಿಂದ ವಿದ್ಯಾರ್ಥಿಗಳು ಬರುತ್ತಾರೆ ಎಂದು ಖಾನ್ ಸರ್ ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಖಾನ್ ಸರ್ ಅವರು ವಿಶ್ವದ ಅತ್ಯುತ್ತಮ ಶಿಕ್ಷಕ, ಗುರು ಮತ್ತು ಸಹೋದರ ಎಂದು ಶ್ಲಾಘಿಸಿದರು. ಅವರಿಗಿಂತ ದೊಡ್ಡ ಸಹೋದರ ಇಲ್ಲ. ಕೆಲವು ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಖಾನ್ ಸರ್‌ಗೆ ರಾಖಿ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.