ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ 'ದೇವಾ'ದಲ್ಲಿ ಅಭಿನಯಿಸಿರುವ ಸೌತ್ ಬ್ಯೂಟಿ ಪೂಜಾ ಹೆಗ್ಡೆ, ಇದೀಗ ಬಹುದಿನಗಳ ಬಳಿಕ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ರೋಶನ್ ಆಂಡ್ರ್ಯೂಸ್ ನಿರ್ದೇಶನ ಮಾಡಿರುವ ಈ ಚಿತ್ರದ ಮೂಲಕ ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ಮನರಂಜಿಸಲು ಪೂಜಾ ಎದುರುನೋಡುತ್ತಿದ್ದಾರೆ. ನಟಿಯ ಸಿನಿಮಾ ಕಣ್ತುಂಬಿಕೊಳ್ಳಲು ಕಾತರದಿಂದ ನಿರೀಕ್ಷಿಸುತ್ತಿದ್ದ ಫ್ಯಾನ್ಸ್ಗೆ ಇದೀಗ ನಿರಾಸೆ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ.
ಇದನ್ನೂ ಓದಿ: ಸಣಾಪುರ ವಿತರಣಾ ನಾಲೆ ಹೂಳು ತೆಗೆಸಿದ ರೈತರು
ಇತ್ತೀಚಿನ ಮಾಹಿತಿ ಪ್ರಕಾರ, ಚಿತ್ರ ತಯಾರಕರು 'ದೇವ' ಸಿನಿಮಾವನ್ನು 2024ರ ದಸರಾ ಹಬ್ಬದ ಸಮಯದಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದರು. ಆದ್ರೆ, ಕಾರಣಾಂತರಗಳಿಂದ ಇದೀಗ ಚಿತ್ರವನ್ನು ಫೆಬ್ರವರಿ 14, 2025ರಂದು ಬಹುತೇಕ ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ತಮ್ಮ ನೆಚ್ಚಿನ ನಟಿಯ ಸಿನಿಮಾವನ್ನು ಬಹುದಿನಗಳ ನಂತರ ಬೆಳ್ಳಿಪರದೆಯ ಮೇಲೆ ನೋಡಲು ಕುತೂಹಲ ವ್ಯಕ್ತಪಡಿಸಿದ್ದ ಅಭಿಮಾನಿಗಳಲ್ಲಿ ಇದೀಗ ಭಾರೀ ನಿರಾಸೆ ಮೂಡಿದೆ.
ಚಿತ್ರವು ಇತ್ತೀಚೆಗಷ್ಟೇ ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಸಿದ್ಧಾರ್ಥ್ ರಾಯ್ ಕಪೂರ್ ನಿರ್ಮಿಸಿದ ಈ ಚಿತ್ರದಲ್ಲಿ ಪಾವೈಲ್ ಗುಲಾಟಿ, ಪೂಜಾ ಹೆಗ್ಡೆ, ಶಾಹೀದ್ ಕಪೂರ್, ಕುಬ್ರ ಸೇಟ್ ಸೇರಿದಂತೆ ಮುಂತಾದವರ ತಾರಾಗಣವಿದೆ.