ಬೆಂಗಳೂರು: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ಹಿನ್ನೆಲೆ ನಮ್ಮ ರೈತರಿಗೆ ಮತ್ತು ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ ಎಂಬ ಕೂಗು ರಾಜ್ಯವ್ಯಾಪಿ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಈ ಮಧ್ಯೆ ಕರ್ನಾಟಕ ರಕ್ಷಣ ವೇದಿಕೆ ಇಂದು ಕನ್ನಡ ಚಿತ್ರರಂಗದವರು ನಮ್ಮ ಹೋರಾಟಕ್ಕೆ ಬೆಂಬಲಿಸಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ನಟ ದರ್ಶನ್, ಕಿಚ್ಚ ಸುದೀಪ್ ಟ್ವೀಟ್ ಮಾಡಿ ಬೆಂಬಲಿಸಿದರು.
ದರ್ಶನ್, ಶಿವರಾಜ್ಕುಮಾರ್ ಮತ್ತು ಕಿಚ್ಚ ಸುದೀಪ್ ಅವರ ನಂತರದಲ್ಲಿ ವಿಡಿಯೋ ಮುಖೇನ ತಮಿಳುನಾಡಿನ ವಿರುದ್ಧ ಮುಂಗಾರು ಮಳೆ ಬೆಡಗಿ, ನಟಿ ಪೂಜಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಕಾವೇರಿ ವಿಚಾರ ಕುರಿತು ಮಾತನಾಡಿದ ನಟಿ, "175 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿಯಿದೆ. ಟ್ರಿಬ್ಯುನಲ್ ಸದಸ್ಯರನ್ನು ಕೆಆರ್ಎಸ್ಗೆ ಭೇಟಿ ನೀಡುವಂತೆ ತಿಳಿಸಬೇಕು. ಮುಳುಗುವಷ್ಟು ನೀರು ಇದೆಯಾ ಎಂಬುದನ್ನು ನೋಡಲು ಅವರಿಗೆ ಹೇಳಬೇಕು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ನೀಡುತ್ತಿರುವ ಹಣ ಕಟ್ಟ ಕಡೆಯ ವ್ಯಕ್ತಿಗೂ ತಲುಪಲಿ/ ಕೆ.ಹೆಚ್.ಮುನಿಯಪ್ಪ
"ಡ್ಯಾಮ್ ಇರುವ ಮಂಡ್ಯ ಜಿಲ್ಲೆಗೆ ಕುಡಿಯಲು ನೀರಿಲ್ಲ. ಇದೆಲ್ಲಾ ಅವರಿಗೆ ಅರ್ಥ ಆಗುತ್ತಿಲ್ಲವೇ? ಕರ್ನಾಟಕ ಸರ್ಕಾರ ಗಟ್ಟಿಯಾಗಿ ನಿರ್ಧಾರ ತೆಗೆದುಕೊಳ್ಳಲಿ, ನೀರು ಬಿಡುವುದನ್ನು ನಿಲ್ಲಿಸಲಿ" ಎಂದು ನಟಿ ಪೂಜಾ ಗಾಂಧಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: VIDEO | ಗಣಪತಿ ದರ್ಶನಕ್ಕೆಂದು ಅಂಬಾನಿ ಮನೆಗೆ ಬಂದ ದಿಶಾ; ನಟಿಯ ಲುಕ್ ನೋಡಿ ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಕಾವೇರಿ ವಿಚಾರ ಕುರಿತಂತೆ ಮಾತನಾಡಿದ ಸ್ಯಾಂಡಲ್ವುಡ್ನ ಹಿರಿಯ ನಟ ಶಿವರಾಜ್ಕುಮಾರ್, "ನಮ್ಮ ರಾಜ್ಯದಲ್ಲಿ ಈ ಬಾರಿ ಮಳೆ ಕಡಿಮೆಯಾಗಿ ರೈತರು ಕಂಗಾಲಾಗಿದ್ದಾರೆ. ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗುವ ಭೀತಿಯಿದೆ. ಈ ಸ್ಥಿತಿಯನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಬೇಕು, ನ್ಯಾಯಾಲಯ ನಮ್ನ ಪರಿಸ್ಥಿಯನ್ನು ಅವಲೋಕಿಸಿ ತೀರ್ಪು ನೀಡಬೇಕು" ಎಂದು ಹೇಳಿದ್ದಾರೆ.