ಕೋಲಾರ ತಾಲೂಕಿನ ಕಡಗಟ್ಟೂರು ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂದಿಂದ ಸೋಮವಾರ ಹಮ್ಮಿಕೊಂಡಿದ್ದ ಲಾನುಭವಿಗಳಿಗೆ ಬೆಳೆ ಸಾಲದ ಚೆಕ್​ ವಿತರಣೆ ಕಾರ್ಯಕ್ರಮದಲ್ಲಿ ಕೆ.ವಿ.ದಯಾನಂದ್​ ರೈತರಿಗೆ ಚೆಕ್​ ವಿತರಿಸಿದರು. ನಾಗೇಶ್​, ಮುನೀಶ್ವರಪ್ಪ ಇದ್ದರು.  
ನ್ಯೂಸ್

ಸಹಕಾರ ರಂಗದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು

ಕೋಲಾರ: ಸಹಕಾರಿ ಸಂಘಗಳನ್ನು ರಾಜಕೀಯ ಹಸ್ತ ಕ್ಷೇಪದಿಂದ ದೂರ ಉಳಿಸಿದಾಗ ಮಾತ್ರ ಮಾದರಿ ಸಂಘಗಳಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಡಗಟ್ಟೂರು ಎಸ್​ಎಫ್​ಸಿಎಸ್​ ಅಧ್ಯಕ್ಷ ಕೆ.ವಿ.ದಯಾನಂದ್​ ಹೇಳಿದರು.

ತಾಲೂಕಿನ ಕಡಗಟ್ಟೂರು ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ಬೆಳೆ ಸಾಲದ ಚೆಕ್​ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘದಿಂದ ಪಡೆದುಕೊಂಡ ಸಾಲವನ್ನು ಫಲಾನುಭವಿಗಳು ಶೇ.100ರಷ್ಟು ಮರು ಪಾವತಿ ಮಾಡಿದ ಹಿನ್ನಲೆಯಲ್ಲಿ ಕಡಗಟ್ಟೂರು ಸಂಘ ಮಾದರಿ ಸಂಘವಾಗಿ ಬೆಳೆದಿದೆ ಎಂದರು.
ಈಗಾಗಲೇ ಸಂಘದಿಂದ 30 ಕೋಟಿಯಷ್ಟು ಬೆಳೆ ಸಾಲ, ನಿವೇಶನ ಸಾಲ, ಎಂಟಿಎಲ್​, ಸ್ತ್ರೀ ಶಕ್ತಿ ಸಾಲ ನೀಡಲಾಗಿದೆ. ಆ ಪೈಕಿ 6 ಕೋಟಿಯಷ್ಟು ಬೆಳೆ ಸಾಲ ನೀಡಲಾಗಿದೆ. ಈಗ 48 ಮಂದಿ ರೈತರಿಗೆ 58,67,000 ಬೆಳೆ ಸಾಲ ನೀಡಲಾಗುತ್ತಿದೆ. ಹಿಂದೆ ಸಾಲ ಪಡೆದುಕೊಂಡಿರುವ ರೈತರು, ಮಹಿಳಾ ಸಂಘಗಳ ಸದಸ್ಯರು ಮರು ಪಾವತಿ ಮಾಡಿದ ಕಾರಣ ಸಂಘವು ಆರ್ಥಿಕವಾಗಿ ಶಕ್ತಿ ಪಡೆದುಕೊಂಡಿದೆ. ಶ್ರೀದಲ್ಲೇ ಜಿಲ್ಲಾ ಬ್ಯಾಂಕಿನಿಂದ ಸಾಲ ಸಿಗದಿದ್ದರೆ ಮಹಿಳಾ ಸಂಘಗಳಿಗೆ ಸಂಘದಿಂದಲೇ ಸಾಲ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧಿಕಾರಿಗಳು, ಸಿಬ್ಬಂದಿ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ಯಾರನ್ನು ಸಹ ಅಲೆದಾಡಿಸುವುದಿಲ್ಲ, ಅಗತ್ಯವಿದ್ದ ರೈತರಿಗೆ 24 ತಾಸಿನಲ್ಲಿ ಬೆಳೆ ಸಾಲ ಮಂಜೂರು ಮಾಡಲಾಗುತ್ತಿದೆ.
ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲದಿದ್ದರೆ ಅಭಿವೃದ್ಧಿಹೊಂದಲು ಸಾಧ್ಯ ಎಂಬುದಕ್ಕೆ ಕಡಗಟ್ಟೂರು ನಿದರ್ಶನ ಎಂದು ಬಣ್ಣಿಸಿದರು.
ಕೋಲಾರ ಡಿಸಿಸಿ ಬ್ಯಾಂಕ್​ ರಾಜಕೀಯಕ್ಕೆ ದುರ್ಬಳಕೆ ಆಗಿರುವುದರಿಂದ ಬಲಿಯಾಗಿದೆ. ಇದರಿಂದ ಎರಡೂ ಜಿಲ್ಲೆಯ ರೈತರು, ಮಹಿಳೆಯರು ಸಾಲ ಸೌಲಭ್ಯಗಳಿಂದ ಒಂದು ವರ್ಷದಿಂದ ವಂಚನೆಗೆ ಒಳಗಾಗಿದ್ದಾರೆ. ಸರ್ಕಾರದಿಂದ ಸಹಕಾರಿ ಬ್ಯಾಂಕಿಗೆ ನಯ ಪೈಸೆಯು ಅನುದಾನ ಬರುವುದಿಲ್ಲ. ರಾಜಕೀಯ ವ್ಯಕ್ತಿಗಳು ಯಾರು ಸಹ ಠೇವಣಿ ಇಟ್ಟಿಲ್ಲ. ಕಾಣದ ಕೈಗಳ ಹಸ್ತಕ್ಷೇಪದಿಂದ ಬ್ಯಾಂಕ್​ ಬರುಡಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಬ್ಯಾಂಕಿನಲ್ಲಿ ರೈತರು, ಮಹಿಳಾ ಸಂಗಳು ಇಟ್ಟಿರುವ ಠೇವಣಿ ಹಾಗೂ ಸಾಲ ಮರು ಪಾವತಿಯನ್ನು ಪರಿಗಣಿಸಿ ಅಪೆಕ್ಸ್​, ನಬಾರ್ಡ್​ ಬ್ಯಾಂಕ್​ ಜಿಲ್ಲಾ ಬ್ಯಾಂಕಿಗೆ ಸಾಲ ನೀಡುತ್ತದೆ. ಅದನ್ನು ಬಡ್ಡಿ ಸಮೇತ ಮೂರು ತಿಂಗಳಿಗೊಮ್ಮೆ ಮರು ಪಾವತಿ ಮಾಡಬೇಕು. ಕೆಲವರು ಅರಿವಿನ ಕೊರತೆಯಿಂದ ಹೇಳಿಕೆಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾ ಬ್ಯಾಂಕಿನಲ್ಲಿ ಆಡಳಿತ ಮಂಡಳಿ ಅಧಿಕಾರದಲ್ಲಿ ಇದ್ದಾಗ ಸಾಲ ಮರುಪಾವತಿ, ಠೇವಣಿ ಮೊತ್ತ ಹೆಚ್ಚಾಗಿತ್ತು. ಈಗಾಗಲೇ ಚುನಾವಣೆ ನಡೆದಿದ್ದರೆ ಆಡಳಿತ ರಚನೆಯಾಗಿದ್ದರೆ ಅಧಿಕಾರಿಗಳು ಬ್ಯಾಂಕ್​ ರೈತರ, ಮಹಿಳೆಯರ ಪರವಾಗಿ ನಿಲ್ಲುತ್ತಿತ್ತು, ಅಧಿಕಾರಿಗಳು ಬಡವರಿಗೆ ಸೌಲಭ್ಯ ನೀಡಲು ಮುಂದಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡೇವಿಡ್​, ಸಿಇಒ ಮುನೀಶ್ವರಪ್ಪ, ಸಿಬ್ಬಂದಿಯಾದ ನಾಗೇಶ್​, ಪ್ರಶಾಂತ್​ ಮತಿತರರು ಹಾಜರಿದ್ದರು.