ನ್ಯೂಸ್

ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ: ಎಂಎಲ್​ಸಿ ಡಾ. ಸೂರಜ್‌ ರೇವಣ್ಣ!

ಹಾಸನ: ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದು, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಆರೋಪವನ್ನು ಖಡಾಖಂಡಿತವಾಗಿ ತಿರಸ್ಕಾರ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್‌ ರೇವಣ್ಣ ಹೇಳಿದರು.

ಹೊಳೆನರಸೀಪುರ ತಾಲೂಕಿನ ಗನ್ನಿಕಡ ಫಾರ್ಮ್‌ ಹೌಸ್‌ನಲ್ಲಿ ಮೊದಲ ಬಾರಿ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಆರೋಪಗಳ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಇದು ಸಂಪೂರ್ಣ ರಾಜಕೀಯ ಷಡ್ಯಂತ್ರ. ಅದರ ಬಗ್ಗೆ ನಾನು ಇವತ್ತು ಏನು ಪ್ರತಿಕ್ರಿಯೆ ಕೊಡಲ್ಲ. ಇಂತಹವರು, ಅಂತಹವರು, ಅವರು, ಇವರು ಮಾಡಿದರು ಎಂದು ನಾನು ಚರ್ಚೆ ಮಾಡಲು ಹೋಗಲ್ಲ, ತನಿಖೆ ಪ್ರಗತಿಯಲ್ಲಿದೆ, ಸತ್ಯಾಸತ್ಯತೆ ಹೊರಗೆ ಬರುತ್ತೆ. ಇಡೀ ರಾಜ್ಯದ ಜನತೆ ಅದನ್ನು ನೋಡುತ್ತಾರೆ ಎಂದು ಹೇಳಿದರು.

ಕಾನೂನು ವ್ಯವಸ್ಥೆಯಲ್ಲಿ ಏನು ತೀರ್ಮಾನ ಆಗಬೇಕು ಆಗುತ್ತೆ, ಅವನ ಮೇಲೆಯೂ ಎಫ್‌ಐಆರ್ ಆಗಿದೆ. ಕಾನೂನಿನಲ್ಲಿ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಗೆ ಬರಲಿ. ಸತ್ಯ ಏನಿದೆ ಅದು ಹೊರಗೆ ಬಂದೇ ಬರುತ್ತದೆ. ನಾಡಿನ ಕಾನೂನಿನ ಮೇಲೆ ನನಗೆ ವಿಶ್ವಾಸವಿದೆ ಎಂದು ಹೇಳಿದ್ದರೆ.

ಸೂರಜ್ ರೇವಣ್ಣ ವಿರುದ್ದ ಎಫ್​ಐಆರ್ ​ದಾಖಲಾಗಿದೆ. ನಿನ್ನೆ(ಜೂ.21) ಬೆಂಗಳೂರಿನ ಡಿಜಿ ಕಛೇರಿಗೆ ದೂರು ನೀಡಿದ್ದ ಸಂತ್ರಸ್ಥ, ದೂರು ನೀಡುವಾಗಲೇ ಹಾಸನ ಎಸ್ಪಿ ಗೆ ದೂರಿನ ಪ್ರತಿ ಮೇಲ್ ಮಾಡಿದ್ದರು.

ದೂರು ನೀಡಲು ಠಾಣೆಗೆ ಆಗಮಿಸಿದ ಸಂತ್ರಸ್ಥ: ಅದರಂತೆ ಇಂದು ಹಾಸನದ ಜಿಲ್ಲಾ ಪೊಲೀಸ್ ಕಛೇರಿಗೆ ಸಂತ್ರಸ್ಥನ ದೂರು ತಲುಪಿದ್ದು, ಜಿಲ್ಲಾ ಪೊಲೀಸ್ ಕಚೇರಿಗೆ ಬಂದ ದೂರನ್ನು, ಅಧಿಕಾರಿಗಳನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ವರ್ಗಾಯಿಸಿದ್ದಾರೆ. ದೂರಿನ ಸತ್ಯಾಸತ್ಯತೆಗಾಗಿ ದೂರುದಾರನನ್ನು ಸಂಪರ್ಕ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದು, ಈ ಹಿನ್ನಲೆ ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ದೂರು ನೀಡಲು ಅರಕಲಗೂಡು ತಾಲ್ಲೂಕು ಮೂಲದ ಸಂತ್ರಸ್ಥ ಆಗಮಿಸಿದ್ದಾರೆ.