ಉತ್ತರಪ್ರದೇಶ: ಸೆ.15 ರಂದು 17 ವರ್ಷದ ಹುಡುಗಿಯೊಬ್ಬಳ ದುಪಟ್ಟಾ ಎಳೆದ ಕಾರಣ ಆಕೆ ಸೈಕಲ್‌ನಿಂದ ಬಿದ್ದು, ಸಾವನ್ನಪ್ಪಿದ ದಾರುಣ ಘಟನೆ ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಅಧಿಕಾರ ಇದ್ದಾಗೆಲ್ಲ ಬಿಎಸ್ವೈಗೆ ತೊಂದ್ರೆ ಕೊಟ್ರು, ಈಗ ಅಧಿಕಾರ ಬೇಕೆಂದಾದಾಗ ಅಡ್ಡಾಡಪ್ಪ ಅಂತಿದಾರೆ: ಅಬಕಾರಿ ಸಚಿವ
ಹುಡುಗಿಯ ದುಪಟ್ಟಾ ಎಳೆದು ಆಕೆಯ ಸಾವಿಗೆ ಕಾರಣರಾಗಿದ್ದ ಆರೋಪಿಗಳು, ಘಟನೆ ನಡೆದ ಬಳಿಕ ವಿಚಾರಣೆ ವೇಳೆ ಪೊಲೀಸರಿಂದ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಯುಪಿ ಪೊಲೀಸರು, ಎನ್‌ಕೌಂಟರ್‌ನಡಿ ಆರೋಪಿ ಶಹಬಾಜ್ ಮತ್ತು ಫೈಸಲ್ ಇಬ್ಬರ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯ ವಿವರ: 17 ವರ್ಷದ ಹುಡುಗಿ ಎಂದಿನಂತೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ದುಷ್ಕರ್ಮಿಗಳಾದ ಶಹಬಾಜ್ ಮತ್ತು ಆತನ ಸಹೋದರ ಅರ್ಬಾಜ್, ಇಬ್ಬರೂ ಆಕೆಯನ್ನು ಅಡ್ಡಗಟ್ಟಿ, ಚುಡಾಯಿಸಿದ್ದಾರೆ. ಬೈಕ್ನಲ್ಲಿ ಹೋಗುತ್ತಿದ್ದ ಪುಂಡರು ಹುಡುಗಿಯ ದುಪಟ್ಟಾವನ್ನು ಎಳೆದಿದ್ದಾರೆ.
ತನ್ನ ದುಪಟ್ಟಾವನ್ನು ಹಿಂದಕ್ಕೆ ಎಳೆಯಲು ಪ್ರಯತ್ನಿಸಿದ ಹುಡುಗಿ, ಎಡವಿ ನೆಲಕ್ಕೆ ಬಿದ್ದಿದ್ದಾಳೆ. ಇದೇ ವೇಳೆ ಹಿಂದಿನಿಂದ ಬಂದ ಫೈಸಲ್ ಎಂದು ಗುರುತಿಸಲಾದ ಮತ್ತೊಬ್ಬ ಯುವಕನು ಆಕೆಯ ತಲೆಯ ಮೇಲೆ ಬೈಕ್ ಹತ್ತಿಸಿದ ಪರಿಣಾಮ, ಹುಡುಗಿ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾಳೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).