women police officer has been suspended 
ನ್ಯೂಸ್

ಆಮ್ಲೆಟ್, ಜ್ಯೂಸ್ ಆರ್ಡರ್ ಮಾಡಿ ಬಿಲ್ ಕೊಡದ ಸಬ್-ಇನ್‌ಸ್ಪೆಕ್ಟರ್, 3 ಮಹಿಳಾ ಕಾನ್‌ಸ್ಟೆಬಲ್‌ಗಳು ಅಮಾನತು!

ತಮಿಳುನಾಡು: ಅಂಗಡಿಯಲ್ಲಿ ಬ್ರೆಡ್ ಆಮ್ಲೆಟ್, ಜ್ಯೂಸ್‌ ಆರ್ಡರ್ ಮಾಡಿ ಬಿಲ್ ಕೊಡದ ಸಬ್-ಇನ್‌ಸ್ಪೆಕ್ಟರ್ ವಿಜಯಲಕ್ಷ್ಮಿ ಮತ್ತು ಮೂವರು ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ(Suspended).

ಘಟನೆಯ ವಿವರ: ತಮಿಳುನಾಡಿನ(Tamilnadu) ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ವಿಜಯಲಕ್ಷ್ಮಿ ಮತ್ತು ಮೂವರು ಮಹಿಳಾ ಕಾನ್‌ಸ್ಟೆಬಲ್‌ಗಳು ಸ್ಥಳೀಯ ಅಂಗಡಿಯೊಂದರಲ್ಲಿ ಬ್ರೆಡ್ ಆಮ್ಲೆಟ್ ಮತ್ತು ಜ್ಯೂಸ್ ಆರ್ಡರ್ ಮಾಡಿ ಹಣ ಕೊಡಲು ನಿರಾಕರಿಸಿದ್ದಾರೆ. ತಾವು ಆರ್ಡರ್ ಮಾಡಿದ್ದನ್ನು ತೆಗದುಕೊಂಡು ಹೋಗುವುದರ ಜತೆಗೆ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಅಂಗಡಿ ಮಾಲೀಕರು ಬಿಲ್ ಕೊಡಿ ಮೇಡಂ ಎಂದು ಕೇಳಿದ್ದಕ್ಕೆ ಅವರಿಗೆ ಬೆದರಿಕೆ ಹಾಕಿದ್ದಾರೆ.

ಅಂಗಡಿಯ ಮಾಲೀಕರು ಮೇಡಂ ಹಣ ಕೊಡಿ ಎಂದು ಕೇಳಿದ ಕೂಡಲೇ ಸಬ್ ಇನ್‌ಸ್ಪೆಕ್ಟರ್ ವಿಜಯಲಕ್ಷ್ಮಿ ಮತ್ತಿತರರು ಅಂಗಡಿ ಮಾಲೀಕರಿಗೆ ನಿನ್ನ ಅಂಗಡಿಯ ಪರವಾನಗಿ ರದ್ದುಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಂಗಡಿ ಮಾಲೀಕ ಮಣಿಮಂಗಲಂ ದೂರು ದಾಖಲಿಸಿದ್ದು, ಸಿಸಿಟಿವಿ ದೃಶ್ಯಾವಳಿ(CCTV Footage) ಆಧರಿಸಿ ತನಿಖೆ ಆರಂಭಿಸಲಾಗಿದೆ.

ಇದೇ ವೇಳೆ ತಾಂಬರಂ ಕಮಿಷನರ್ ಅಮಲರಾಜ್ ಸಬ್ ಇನ್ಸ್​ಪೆಕ್ಟರ್ ವಿಜಯಲಕ್ಷ್ಮಿ ಮತ್ತು ಇತರ ಮೂವರು ಕಾನ್​ಸ್ಟೇಬಲ್​ಗಳನ್ನು ಅಮಾನತುಗೊಳಿಸಿದ್ದಾರೆ. ಈ ಕುರಿತು ಮತ್ತಷ್ಟು ತನಿಖೆ ನಡೆಯುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ,(ಏಜೆನ್ಸೀಸ್).