ನ್ಯೂಸ್

ಕೇಳಿದ್ದು 120ಕ್ಕೆ ಹಾಕಿದ್ದು 720 ರೂ.ಗೆ: ಬಂಕ್​ ಸಿಬ್ಬಂದಿ ಕಪಾಳಕ್ಕೆ ಬಾರಿಸಿದ ಪೊಲೀಸ್​ಗೆ ಹಿಗ್ಗಾಮುಗ್ಗಾ ಥಳಿತ! Police officer

Police officer : 120 ರೂಪಾಯಿಗೆ ಪೆಟ್ರೋಲ್​ ಹಾಕುವ ಬದಲು 720 ರೂ. ಮೌಲ್ಯದ ಇಂಧನ ತುಂಬಿದ ಬಂಕ್​ ಸಿಬ್ಬಂದಿಯ ಕಪಾಳಕ್ಕೆ ಬಾರಿಸಿದ ಪೊಲೀಸ್​ ಅಧಿಕಾರಿಯೊಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ವಾಹನಕ್ಕೆ ಪೆಟ್ರೋಲ್ ತುಂಬಿಸಲು ಹೋಗಿದ್ದರು. ಪೆಟ್ರೋಲ್ ಬಂಕ್​ ಸಿಬ್ಬಂದಿಗೆ 120 ರೂ. ಮೌಲ್ಯದ ಪೆಟ್ರೋಲ್ ಹಾಕುವಂತೆ ಕೇಳಿದ್ದಾರೆ. ಆದರೆ, ಆ ಸಿಬ್ಬಂದಿ ತಪ್ಪಾಗಿ 720 ರೂ. ಮೌಲ್ಯದ ಪೆಟ್ರೋಲ್ ಹಾಕಿದರು.

ಕೇಳದ್ದಕ್ಕಿಂತ ಜಾಸ್ತಿ ಪೆಟ್ರೋಲ್​ ಹಾಕಿದ್ದರಿಂದ ಕೋಪಗೊಂಡ ಪೊಲೀಸ್ ಅಧಿಕಾರಿ ಸಿಬ್ಬಂದಿಯ ಕಪಾಳಕ್ಕೆ ಬಾರಿಸಿದರು. ಆದರೆ ಮುಂದೆ ನಡೆದ ಘಟನೆ ಮಾತ್ರ ಆ ಅಧಿಕಾರಿಗೆ ಆಘಾತವನ್ನುಂಟು ಮಾಡಿತು.

ಪೆಟ್ರೋಲ್ ಪಂಪ್‌ನ ವ್ಯವಸ್ಥಾಪಕ ಸೇರಿದಂತೆ ಇತರ ಸಿಬ್ಬಂದಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರಲ್ಲಿ ಒಬ್ಬ ಸಿಬ್ಬಂದಿ ಕನಿಷ್ಠ ನಾಲ್ಕರಿಂದ ಐದು ಬಾರಿ ಪೊಲೀಸ್​ ಅಧಿಕಾರಿಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಮತ್ತೊಬ್ಬ ಸಿಬ್ಬಂದಿ ಕೂಡ ಅಧಿಕಾರಿಗೆ ಹೊಡೆದಿದ್ದಾರೆ.

ಈ ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)