ಹೈದರಾಬಾದ್: ನಗರದಲ್ಲಿ ಪದೇ ಪದೇ ಹೃದಯಾಘಾತಗಳ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಹೈದರಾಬಾದ್‌ನ ಆರೋಗ್ಯ ಅಧಿಕಾರಿಗಳು ಮಂಗಳವಾರ ಗೋಶಾಮಹಲ್‌ನಲ್ಲಿ ನಗರ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ ಅಥವಾ ಸಿಪಿಆರ್ ತರಬೇತಿಯನ್ನು ನೀಡಿದರು.
ವ್ಯಕ್ತಿಯ ಜೀವವನ್ನು ಉಳಿಸಲು ತುರ್ತು ಸಂದರ್ಭಗಳಲ್ಲಿ ಈ ತಂತ್ರವನ್ನು ಬಳಸಲಾಗುತ್ತದೆ. ಈ ವಿಶೇಷ ತಂತ್ರವನ್ನು ಪೊಲೀಸರಿಗೆ ಕಲಿಸಲಾಗುತ್ತಿದ್ದು ಅದನ್ನು ಪೊಲೀಸರು ಡಮ್ಮಿಗಳ ಸಿಪಿಆರ್ ಮೇಲೆ ಬಳಸುತ್ತಿರುವುದನ್ನು ಟ್ವಿಟರ್ ವೀಡಿಯೊ ತೋರಿಸುತ್ತಿದೆ.
ಆರಾಮ್‌ಘರ್ ಚೌರಸ್ತಾದಲ್ಲಿ ಹೃದಯಾಘಾತದಿಂದ ರಸ್ತೆಯ ಮೇಲೆ ಕುಸಿದು ಬಿದ್ದಾಗ ಟ್ರಾಫಿಕ್ ಪೋಲೀಸ್ ಒಬ್ಬರು ವ್ಯಕ್ತಿಯ ಜೀವವನ್ನು ಇದೇ ತಂತ್ರ ಬಳಸಿ ಉಳಿಸಿದ ಕೇವಲ ನಾಲ್ಕು ದಿನಗಳ ನಂತರ ತರಬೇತಿ ನೀಡಲಾಗಿದೆ.
ಸಿಪಿಆರ್ ಎನ್ನುವುದು ಜೀವರಕ್ಷಕ ತಂತ್ರವಾಗಿದ್ದು, ಹೃದಯಾಘಾತ ಅಥವಾ ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ಹೊರತೆಗೆದು ಕಾಪಾಡಲು, ಹೀಗೆ ವ್ಯಕ್ತಿಯ ಹೃದಯಬಡಿತ ನಿಂತ ಅನೇಕ ತುರ್ತು ಸಂದರ್ಭಗಳಲ್ಲಿ ಉಪಯುಕ್ತವಾಗಿದೆ. (ಏಜೆನ್ಸೀಸ್)