ಹಾಪುರ್: ಉತ್ತರಪ್ರದೇಶದ ಹಾಪುರದಲ್ಲಿ ಪೊಲೀಸರು ಎನ್ಕೌಂಟರ್ ನಡೆಸಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್ ನವೀನ್ ಕುಮಾರ್‌ನನ್ನು ಹತ್ಯೆ ಮಾಡಲಾಗಿದೆ. ವಿಶೇಷ ಕಾರ್ಯಪಡೆ (STF) ಮತ್ತು ದೆಹಲಿ ಪೊಲೀಸರ ಜಂಟಿ ತಂಡವು ಗುರುವಾರ (ಮೇ 29) ಹಾಪುರ್ ಕೊಟ್ವಾಲಿ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಕುಖ್ಯಾತ ಶಾರ್ಪ್‌ಶೂಟರ್‌ನನ್ನು ಕೊಂದಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತನನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಕೊಲೆ ಸೇರಿದಂತೆ ಹಲವಾರು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ವಾಂಟೆಡ್ ಕ್ರಿಮಿನಲ್ ಆಗಿದ್ದ ಎಂದು ಹೇಳಲಾಗಿದೆ.
ಇದನ್ನೂ ಓದಿ: ಇಂದೇ RCB v PBKS ಕ್ವಾಲಿಫೈರ್-1 ಕದನ! ಬಹುನಿರೀಕ್ಷಿತ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಹೇಗೆ? ಹೀಗಿದೆ ಲೆಕ್ಕಾಚಾರ
ಎಡಿಜಿಪಿ ಅಮಿತಾಭ್ ಯಶ್ ಅವರ ಪ್ರಕಾರ, ಬುಧವಾರ ರಾತ್ರಿ ಎಸ್‌ಟಿಎಫ್‌ನ ನೋಯ್ಡಾ ಘಟಕ ಮತ್ತು ದೆಹಲಿ ಪೊಲೀಸರ ವಿಶೇಷ ಘಟಕವನ್ನು ಒಳಗೊಂಡ ಜಂಟಿ ತಂಡವು ಹಾಪುರ್ ಕೊತ್ವಾಲಿಯಲ್ಲಿ ಅಪರಾಧಿಗಳ ಗುಂಪಿನೊಂದಿಗೆ ಗುಂಡಿನ ಚಕಮಕಿ ನಡೆಸಿತು. ಗುಂಡಿನ ಚಕಮಕಿಯಲ್ಲಿ ನವೀನ್ ಕುಮಾರ್ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಎನ್ಕೌಂಟರ್ ನಲ್ಲಿ ಹತ್ಯೆಯಾಗಿರುವ ನವೀನ್ ಮೇಲೆ ದೆಹಲಿಯ ಥಾನಾ ಫರ್ಶ್ ಬಜಾರ್‌ನಲ್ಲಿ ಕೊಲೆ, ದರೋಡೆ, ಅಪಹರಣ ಸೇರಿ 20ಕ್ಕೂ ಪ್ರಕರಣ ದಾಖಲಾಗಿದ್ದವು. ಈ ಹಿಂದೆ ದೆಹಲಿಯಲ್ಲಿ ಪ್ರಕರಣದಲ್ಲಿ ನವೀನ್ ಜೈಲು ಶಿಕ್ಷೆಯನ್ನು ಸಹ ಅನುಭವಿಸಿದ್ದ ಎಂದು ಹೇಳಲಾಗಿದೆ.
(ಏಜೆನ್ಸೀಸ್)