ನ್ಯೂಸ್

ಮಹಿಳೆಗೆ ಬೆದರಿಕೆ; ಬಾಲಿವುಡ್​ ನಟನ ವಿರುದ್ಧ ಪ್ರಕರಣ ದಾಖಲು

ಮುಂಬೈ: ಜಿಮ್​ಗೆ ಬರುತ್ತಿದ್ದ ಮಹಿಳೆ ಒಬ್ಬರಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಬಾಲಿವುಡ್​ ನಟ ಸಾಹಿಲ್​ ಖಾನ್​ ಮತ್ತು ಮಹಿಳೆ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.

43 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನ

2023ರ ಫೆಬ್ರವರಿ ತಿಂಗಳಲ್ಲಿ ದೂರುದಾರರು ಮಹಿಳೆ​ ಹಾಗೂ ಮಹಿಳೆ ನಡುವೆ ಹಣಕ್ಕಾಗಿ ಜಗಳ ನಡೆದಿತ್ತು. ಈ ವೇಳೆ ತನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಮಾನ ಕಳೆಯುವುದಾಗಿ ಮಹಿಳೆ ಬೆದರಿಕೆ ಹಾಕಿದ್ದರು.

ಆರೋಪಿ ಮಹಿಳೆ ಹಾಗೂ ಸಾಹಿಲ್​​ ಸಾಮಾಜಿಕ ಜಾಲತಾಣಳಲ್ಲಿ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರ ಫೋಟೋಗಳನ್ನು ಹಾಕಿ ಅವಹೇಳನ ಮಾಡಿದ್ಧಾರೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ಧಾರೆ.

FIR ದಾಖಲು

ಇನ್ನು ಮಹಿಳೆ ಈ ಕುರಿತು ಓಶಿವಾರ ಪೊಲೀಸ್​ ಠಾಣೆಯಲ್ಲಿ ದುರು ದಾಖಲಿಸಿದ್ದು ಪೊಲೀಸರು ಭಾರತ ದಂಡ ಸಂಹಿತೆ(IPC Section) ಅಡಿ ಮಾನಹಾನಿ, ಬೆದರಿಕೆ, ಮಹಿಳೆಯರ ಗೌರವಕ್ಕೆ ಧಕ್ಕೆ ಅಡಿ FIR ದಾಖಲಿಸಿದ್ದಾರೆ.