ನ್ಯೂಸ್

ಜಮ್ಮು-ಕಾಶ್ಮೀರದ ಪೂಂಚ್​​ನಲ್ಲಿ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದ ಪೊಲೀಸರು| Terrorists Arrested

Terrorists Arrested: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ಪೂಂಚ್​ನಲ್ಲಿ ಇಬ್ಬರು ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಶಸ್ತ್ರಾಸ್ತ್ರಗಳನ್ನ ವಶ ಪಡಿಸಿಕೊಂಡಿದ್ದಾರೆ ಎಂದು ಭಾನುವಾರ (ಆಗಸ್ಟ್ 31)  ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ದಾಳಿಯ ಸಮಯದಲ್ಲಿ ಅಜಮಾಬಾದ್‌ನ ತಾರಿಕ್ ಶೇಖ್ ಮತ್ತು ಚೇಂಬರ್ ಗ್ರಾಮದ ರಿಯಾಜ್ ಅಹ್ಮದ್ ಅವರನ್ನು ವಶಕ್ಕೆ ಪಡೆಯಲಾಗಿದೆ.  ಅವರನ್ನು ಪರಿಶೀಲಿಸಿದಾಗ ಎರಡು ಅಸಾಲ್ಟ್ ರೈಫಲ್‌ಗಳು ಮತ್ತು ಕೆಲವು ಮದ್ದುಗುಂಡುಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಇಬ್ಬರ ಬಂಧನ ಬಳಿಕ ಅಜಮಾಬಾದ್‌ನಲ್ಲಿರುವ ಶೇಖ್ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಆತನನ್ನು ಮತ್ತು ಆತನ ಸಹಚರ ಅಹ್ಮದ್‌ನನ್ನು ಬಂಧಿಸಿದರು. ಇಬ್ಬರನ್ನು ವಿಚಾರಣೆ ಮಾಡಿದ ನಂತರ, ಪೊಲೀಸ್ ತಂಡವು ಜಲಿಯನ್ ಗ್ರಾಮದಲ್ಲಿ ಶೇಖ್ ಅವರ ಬಾಡಿಗೆ ನಿವಾಸದ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)