ನ್ಯೂಸ್

ಕೋಳಿ ಜೀವಂತವಾಗಿರುವಾಗಲೇ ರೆಕ್ಕೆ-ಪುಕ್ಕ ಕಿತ್ತು ಇಬ್ಭಾಗ ಮಾಡಿದ ಕಟುಕನನ್ನು ಬಂಧಿಸಿದ ಪೊಲೀಸರು!

ಪರಸ್ಸಾಲ: ಕೋಳಿ ಜೀವಂತವಾಗಿರುವಾಗಲೇ ಅದರ ರೆಕ್ಕೆ-ಪುಕ್ಕ ಕಿತ್ತು ಅದನ್ನು ಎರಡು ಭಾಗವಾಗಿ ಕತ್ತರಿಸಿದ ಆರೋಪದ ಮೇಲೆ ಕಟುಕನೊಬ್ಬನನ್ನು ಕೇರಳದ ಕೆಲ್ಲೆಂಗೋಡ್​ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪುಥನ್ವೀತಿಲ್​ ಮನು (36) ಎಂದು ಗುರುತಿಸಲಾಗಿದೆ. ಕಳೆದ ವಾರ ಗ್ರಾಹಕರೊಬ್ಬರು ಚಿಕನ್​ ತೆಗೆದುಕೊಳ್ಳಲು ಕೆಲ್ಲೆಂಗೋಡ್​ನಲ್ಲಿರುವ ಮನು ಅವರ ಚಿಕನ್​ ಸೆಂಟರ್​ಗೆ ಬಂದಿದ್ದರು. ಈ ವೇಳೆ ಮನು, ಕೋಳಿಯನ್ನು ಮೊದಲು ಸಾಯಿಸದೇ ಜೀವಂತವಾಗಿರುವಾಗಲೇ ಅದರ ರೆಕ್ಕೆ-ಪುಕ್ಕ ಕಿತ್ತುಹಾಕಿದ್ದಾನೆ.

ಇದಿಷ್ಟೇ ಅಲ್ಲದೆ, ಸಹಜವಾಗಿ ಜೀವಂತ ಕೋಳಿಯನ್ನು ಕತ್ತು ಕೊಯ್ದು ಸಾಯಿಸಿ, ನಂತರ ಅದರ ರೆಕ್ಕೆ-ಪುಕ್ಕ ತೆಗೆದು ಮಾಂಸವನ್ನು ಕತ್ತರಿಸಲಾಗುತ್ತದೆ. ಆದರೆ, ಕಟುಕ ಇದ್ಯಾವುದನ್ನು ಮಾಡದೇ ನೇರವಾಗಿಯೇ ಜೀವಂತ ಕೋಳಿಯನ್ನು ಎರಡು ಭಾಗ ಮಾಡಿದ್ದಾನೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಪೊಲೀಸರ ಗಮನಕ್ಕೆ ಬಂದು ಆರೋಪಿ ಮನುವನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)