More

    PSI ಮರು ಪರೀಕ್ಷೆ ದಿನಾಂಕ ಶೀಘ್ರವೇ ಘೋಷಣೆ: ಗೃಹ ಸಚಿವ

    ಶಿವಮೊಗ್ಗ: ಪ್ರತಿಭಾವಂತರು ಪಿಎಸ್‌ಐ ಹುದ್ದೆಗೆ ಬರಬೇಕು ಎನ್ನುವ ಒಂದೇ ಉದ್ದೇಶದಿಂದ ಮರು ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ ಮಾಡಿದ್ದು, ಶೀಘ್ರವೇ ಪರೀಕ್ಷೆ ದಿನಾಂಕ ಘೋಷಣೆ ಆಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಪಿಎಸ್‌ಐ ಪರೀಕ್ಷೆಯಲ್ಲಿ ಹೊಸ ತಂತ್ರಜ್ಞಾನ ಬಳಸಿ ಹಗರಣ ನಡೆಸಲಾಗಿದೆ. ಹಾಗಾಗಿ ಸರ್ಕಾರಕ್ಕೆ ಮರು ಪರೀಕ್ಷೆ ಅನಿವಾರ್ಯ. ನೇಮಕಾತಿ ಸಂಬಂಧ ಹೊರಡಿಸಿದ್ದ ನೋಟಿಫಿಕೇಶನ್‌ ಅನ್ನು ರದ್ದುಪಡಿಸಿದ್ದು, ತಪಸ್ಥಿತರನ್ನು ಹೊರತುಪಡಿಸಿ ಯಾರೆಲ್ಲ ಪರೀಕ್ಷೆ ಬರೆದಿದ್ದಾರೋ ಅವರಿಗೆ ಮರು ಅವಕಾಶ ನೀಡಲಾಗುವುದು. ಈ ಅಕ್ರಮ ಸರ್ಕಾರದ ಕಣ್ಣು ತೆರೆಸಿದೆ. ಪರೀಕ್ಷೆಗಳಲ್ಲಿ ಇಂತಹ ಹಗರಣಗಳು ಬೆಳಕಿಗೆ ಬರುತ್ತಿದ್ದು, ಸೂಕ್ತವಾಗಿ ಕಾನೂನು ತಿದ್ದುಪಡಿ ಆಗಬೇಕಿದೆ ಎಂದರು.

    ಪ್ರತಿಭಾವಂತರು ಪಿಎಸ್‌ಐ ಹುದ್ದೆಗೆ ಬರಬೇಕು. ಹಣದಿಂದ ಕೆಲಸ ಪಡೆಯುತ್ತೇನೆ ಎನ್ನುವವರಿಗೆ ಇದೊಂದು ಪಾಠವಾಗಬೇಕು. ಅಕ್ರಮ ಎಸಗುವವರಿಗೆ ಕಠಿಣ ಶಿಕ್ಷೆ ಆಗಬೇಕು. ಯಾರು ಕಷ್ಟಪಟ್ಟು ಪರೀಕ್ಷೆ ಬರೆದಿದ್ದಾರೋ ಅವರಿಗೆ ಈ ಹುದ್ದೆ ಸಿಗಬೇಕೇ ವಿನಃ ಹಣದಿಂದ ಕೆಲಸ ಪಡೆಯುತ್ತೇನೆ ಎನ್ನುವವರಿಗೆ ಇದು ಪಾಠ ಆಗಬೇಕಿದೆ. ದೈಹಿಕ ಪರೀಕ್ಷೆಗಳನ್ನ ಮತ್ತೊಮ್ಮೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರಿಗೆ ಈ ಪರೀಕ್ಷೆ ಅನುಕೂಲವಾಗಲಿದೆ. ಯಾರು ಪಾಸಾಗಿದ್ದಾರೋ ಅವರು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕಿದೆ. ಅಭ್ಯರ್ಥಿಗಳು ಗೊಂದಲ ಮಾಡಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಅಕ್ರಮರಹಿತವಾಗಿ ಪರೀಕ್ಷೆ ನಡೆಸಲು ತಯಾರಿ ನಡೆಸಿಕೊಂಡು ದಿನಾಂಕ ಘೋಷಿಸಲಾಗುವುದು ಎಂದು ಹೇಳಿದರು.

    ರಾಜ್ಯದಲ್ಲಿ ಒಂದೇ ದಿನ ಇಬ್ಬರು ಪೊಲೀಸ್​ ಹೆಡ್​ಕಾನ್​ಸ್ಟೇಬಲ್ಸ್​ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts