ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೂ ರಾಷ್ಟ್ರಪಕ್ಷಿ ನವಿಲಿಗೂ ಅವಿನಾಭಾವ ಸಂಬಂಧವಿದೆ. ಸ್ವತಃ ಪ್ರಧಾನಿ ಅವರೇ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಭಾನುವಾರ ಪೋಸ್ಟ್ ಮಾಡಿರವ ವಿಡಿಯೋ ಇದಕ್ಕೆ ಸಾಕ್ಷಿ.
ಇದನ್ನೂ ಓದಿರಿ ‘ಡೊನಾಲ್ಡ್ ಟ್ರಂಪ್ ಒಬ್ಬ ಕ್ರೂರಿ, ಮಹಾನ್ ಸುಳ್ಳುಗಾರ…’
ಬಿಡುವಿನ ಸಮಯದಲ್ಲಿ ನರೇಂದ್ರ ಮೋದಿ ಅವರು ರಾಷ್ಟ್ರಪಕ್ಷಿ ಜೊತೆ ಕಾಲ ಕಳೆಯುವ ಮೂಲಕ ವಿಶ್ರಾಂತಿ ಪಡೆಯುವ ಈ ದೃಶ್ಯವನ್ನು ಈಗಾಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಮೋದಿಯವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ 1 ನಿಮಿಷ 47 ಸೆಕೆಂಡ್ ಇದೆ. ಇದರ ಜತೆಗೆ ಪ್ರಧಾನಿ ಅವರು ಹಿಂದಿ ಕವಿತೆಯೊಂದನ್ನೂ ಶೇರ್ ಮಾಡಿದ್ದಾರೆ. ಈ ಕವಿತೆಯು ನವಿಲುಗಳು ಮತ್ತು ಅವುಗಳ ಸೌಂದರ್ಯ ಕುರಿತದ್ದಾಗಿದೆ.
ಪ್ರತಿ ದಿನ ಪ್ರಧಾನಿ ಮೋದಿ ವಾಕಿಂಗ್ ಮಾಡುವ ಸಂದರ್ಭದಲ್ಲಿ ಅವರ ಜತೆಯಲ್ಲೂ ನವಿಲುಗಳು ಹೆಜ್ಜೆ ಹಾಕುತ್ತವೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.