ನ್ಯೂಸ್

ದೆಹಲಿಯನ್ನು ದೇಶದ ಮಾದರಿ ರಾಜ್ಯ ಮಾಡುತ್ತೇವೆ ಎಂದ ಪ್ರಧಾನಿ ನರೇಂದ್ರ ಮೋದಿ | Narendra Modi

Narendra Modi: ದೆಹಲಿ ನಗರಗಳಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಪ್ರಮುಖ ಮೂಲಸೌಕರ್ಯ ಪ್ರಯತ್ನವಾಗಿ, ಪ್ರಧಾನಿ ನರೇಂದ್ರ ಮೋದಿ, ನಗರ ವಿಸ್ತರಣಾ ರಸ್ತೆ-II ರ ಪ್ರಮುಖ ಮಾರ್ಗ ಮತ್ತು ದ್ವಾರಕಾ ಎಕ್ಸ್‌ಪ್ರೆಸ್‌ವೇಯ ದೆಹಲಿ ವಿಭಾಗ ಎರಡು ಪ್ರಮುಖ ಯೋಜನೆಗಳನ್ನು ಭಾನುವಾರ (ಆಗಸ್ಟ್​​ 17) ಉದ್ಘಾಟಿಸಿದರು.

ಹೊಸ ಯೋಜನೆಗಳು ದೆಹಲಿ-ಎನ್‌ಸಿಆರ್ ಪ್ರದೇಶದ ಜನರ ಪ್ರಯಾಣಕ್ಕೆ ಸಹಾಯ ಮಾಡುತ್ತವೆ ಎಂದು ಪ್ರಧಾನಿ ಹೇಳಿದ್ದು, ಈ ಆಧುನಿಕ ಸಂಪರ್ಕಕ್ಕಾಗಿ ದೆಹಲಿ-ಎನ್‌ಸಿಆರ್ ಜನರನ್ನು ನಾನು ಅಭಿನಂದಿಸುತ್ತೇನೆ. ಜಗತ್ತು ಭಾರತವನ್ನು ನಿರ್ಣಯಿಸುವಾಗ, ಅದು ಮೊದಲು ನಮ್ಮ ರಾಜಧಾನಿ ದೆಹಲಿಯನ್ನು ನೋಡುತ್ತದೆ. ನಾವು ದೆಹಲಿಯನ್ನು ಅಭಿವೃದ್ಧಿ ಹೊಂದಿದ ಭಾರತದ ಮಾದರಿಯನ್ನಾಗಿ ಮಾಡಬೇಕು. ನಮ್ಮ ಸರ್ಕಾರವು ಈ ನಿಟ್ಟಿನಲ್ಲಿ ಕಳೆದ 11 ವರ್ಷಗಳಲ್ಲಿ ಅನೇಕ ಹಂತಗಳಲ್ಲಿ ಕೆಲಸ ಮಾಡಿದೆ ಎಂದರು.

ದೆಹಲಿಯಲ್ಲಿ ಅನೇಕ ವರ್ಷಗಳ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಹಿಂದಿನ ಸರ್ಕಾರಗಳು ದೆಹಲಿಯನ್ನು ಕಂದಕಕ್ಕೆ ತಳ್ಳಿದವು. ಈ ಸರ್ಕಾರ ರಾಜ್ಯದಲ್ಲಿ ಪ್ರಗತಿ ತರುವ ಮೂಲಕ, ನೀವು ಆಯ್ಕೆ ಮಾಡಿದ ಈ ಹೊಸ ಸಂಪುಟ ದೆಹಲಿಯನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.(ಏಜೆನ್ಸೀಸ್)