Piyush Goyal: ಪ್ರಧಾನಿ ನರೇದ್ರ ಮೋದಿ ಮತ್ತು ಯುಕೆ ಕೀರ್ ಸ್ಟಾರ್ಮರ್ ಸಹಿ ಹಾಕಿದ ಭಾರತ- ಯುಕೆ ಮುಕ್ತ ವ್ಯಾಪಾರ ಒಪ್ಪಂದವು ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರದಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ ಎಂದು ಕೇಂದ್ರ ವ್ಯಾಪಾರ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶ್ಲಾಘಿಸಿದ್ದಾರೆ.
ಈ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಅದರೆ, ಯುಕೆಯ ಸಂಸತ್ತಿನ ಅನುಮೋದನೆ ಬಾಕಿ ಇದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೋಯಲ್, ಇದು ಭಾರತದ ರೈತರು, ಉದ್ಯಮಿಗಳು, MSME ವಲಯ, ಯುವಕರು ಮತ್ತು ಮೀನುಗಾರರಿಗೆ ಅಪಾರ ಅವಕಾಶಗಳು FTAನಿಂದ ಸೃಷ್ಟಿಯಾಗಲಿದೆ. ಇಲ್ಲಿಯವರೆಗೂ ಸಹಿ ಹಾಕಲಾದ ಎಲ್ಲಾ FTAಗಳಲ್ಲಿ, ಭಾರತ-ಯುಕೆ ನಡುವಿನ FTA ಅತ್ಯಂತ ದೊಡ್ಡ ಒಪ್ಪಂದವಾಗಿದೆ. ಈ ಒಪ್ಪಂದದಲ್ಲಿ ನಮ್ಮ ನಿಯಮದಂತೆ ಸಹಿ ಮಾಡಲಾಗಿದೆ. ನಮ್ಮ ರಫ್ತಿನ ಶೇ 99% ಪ್ರತಿಶತವು ಸುಂಕ ರಹಿತವಾಗಿ UKಗೆ ಹೋಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಹೆಚ್ಚಾದ ಅಪರಾಧ ಕೃತ್ಯಗಳು; ತಮ್ಮದೇ ಮೈತ್ರಿಕೂಟದ ಸರ್ಕಾರದ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ! |Bihar
ಈ ಒಪ್ಪಂದವು 2030ರ ವೇಳೆಗೆ ದ್ವಿಪಕ್ಷಿಯ ವ್ಯಾಪಾರವನ್ನು $120 ಶತಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು ಭಾರತ ಹಾಗೂ ಯುಕೆ ನಡುವಿನ ಪ್ರಸ್ತುತ ವ್ಯಾಪಾರ ಪ್ರಮಾಣವನ್ನು ದ್ವಿಗುಣಗೊಳಿಸುತ್ತದೆ.
"ಯುಪಿಎ ಸರ್ಕಾರವು ನಮ್ಮ ಪ್ರತಿಸ್ಪರ್ಧಿಗಳೊಂದಿಗೆ, ಭಾರತದ ಉತ್ಪಾದನಾ ವಲಯವನ್ನು ನಾಶಮಾಡಲು ಮತ್ತು ತಮ್ಮ ಉತ್ಪನ್ನಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುವ ದೇಶಗಳೊಂದಿಗೆ ಎಫ್‌ಟಿಎಗಳಿಗೆ ಸಹಿ ಹಾಕಿತ್ತು. ಯುಪಿಎ ಆಳ್ವಿಕೆಯಲ್ಲಿ ಸಹಿ ಹಾಕಿದ ಎಫ್‌ಟಿಎಗಳು ದೇಶದ ಹಿತಾಸಕ್ತಿಗೆ ಒಳ್ಳೆಯದಲ್ಲ. ಪ್ರಧಾನಿ ನರೇಂದ್ರ ಮೋದಿ ಸಹಿ ಮಾಡಿದ ಎಫ್‌ಟಿಎಗಳು ಮಾರಿಷಸ್, ಆಸ್ಟ್ರೇಲಿಯಾ, ಎಫ್‌ಟಿಎ ದೇಶಗಳು, UAE ಮತ್ತು ಈಗ UK ಜೊತೆ ಇವೆ" ಎಂದು ಗೋಯಲ್ ಹೇಳಿದರು.