ನ್ಯೂಸ್

ನಾನು ಬದುಕಿರುವವರೆಗೂ ಸಂವಿಧಾನ ಬದಲಿಸಲು ಬಿಡೋಲ್ಲ: ಟೀಕಿಸಿದವರಿಗೆ ಪ್ರಧಾನಿ ತಿರುಗೇಟು​

ಮೋಹನ್​ ಶೆಟ್ಟಿ

ಮಹಾರಾಷ್ಟ್ರ: ಬಿಜೆಪಿ ವಿರುದ್ಧ ವ್ಯಂಗ್ಯವಾಡಿ, ಟೀಕೆ ಮಾಡಿದ ವಿರೋಧ ಪಕ್ಷಗಳು, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ ಎಂದು ನೀಡಿದ ಹೇಳಿಕೆಗೆ ತಿರುಗೇಟು ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ನಾನು ಜೀವಂತವಾಗಿರುವವರೆಗೂ ಯಾವುದೇ ಕಾರಣಕ್ಕೂ ಸಂವಿಧಾನ ಬದಲಿಸಲು ಬಿಡುವುದಿಲ್ಲ ಎಂದು ಹೇಳಿದರು.

ಮಹಾರಾಷ್ಟ್ರದ ಕರಡ್​ನ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ, ನಾನು ಜೀವಂತ ಇರುವವರೆಗೂ ಸಂವಿಧಾನ ಬದಲಾಯಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್​ ಆರೋಪಗಳಿಗೆ ಟಕ್ಕರ್ ಕೊಟ್ಟರು. ಇದೇ ವೇಳೆ ಉದ್ಧವ್ ಠಾಕ್ರೆ ಇಂಡಿಯಾ ಮೈತ್ರಿಕೂಟ ಐದು ವರ್ಷಕ್ಕೆ ಐದು ಪ್ರಧಾನಿಗಳನ್ನು ನಿಲ್ಲಿಸುವ ಫಾರ್ಮುಲವನ್ನು ಹೊಂದಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಮೋದಿ ಪ್ರತಿಕ್ರಿಯಿಸಿದ್ದಾರೆ.

"ಅದು ನಕಲಿ. ಶಿವಸೇನೆ ಪ್ರಕಾರ ಇಂಡಿಯಾ ಮೈತ್ರಿಕೂಟ ಹಲವು ಆಯ್ಕೆಗಳನ್ನು ಹೊಂದಿವೆ ಎಂದು ಹೇಳುತ್ತದೆ. ಅವರಿಗೆ ತಮ್ಮ ನಾಯಕ ಯಾರು ಎಂಬುದನ್ನು ನಿರ್ಧರಿಸಲು ಸಾಧ್ಯವಾಗ್ತಿಲ್ಲ. ಇಂತವರ ಕೈಗೆ ನಮ್ಮ ದೇಶವನ್ನು ಕೊಡ್ತೀರಾ? ಒಂದು ವರ್ಷಕ್ಕೆ ಒಬ್ಬ ಪ್ರಧಾನಿ ಎನ್ನುವಂತೆ ಐದು ವರ್ಷಕ್ಕೆ ಐದು ಪ್ರಧಾನಿಗಳು ಎಂಬುದು ಅವರ ಲೆಕ್ಕಾಚಾರ" ಎಂದು ಪ್ರಧಾನಿ ವ್ಯಂಗ್ಯವಾಡಿದರು,(ಏಜೆನ್ಸೀಸ್).