ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ‘ದಿ ಸಬರಮತಿ ವರದಿ’(The Sabarmati Report) ಸಿನಿಮಾದ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಮೂಲಕ ಸತ್ಯ ಹೊರಬರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಸೂರ್ಯ ಪರ ಪತ್ನಿ ಜ್ಯೋತಿಕಾ ಬ್ಯಾಟಿಂಗ್; ‘ಕಂಗುವ’ ನೆಗೆಟಿವ್ ವಿಮರ್ಶೆಗೆ ಉತ್ತರಿಸಿದ್ದು ಹೀಗೆ.. | Actress Jyotika
ಪ್ರಧಾನಿ ಮೋದಿ ಅವರು ಭಾನುವಾರ (ನವೆಂಬರ್ 17) ಗೋಧ್ರಾ ಘಟನೆಯನ್ನು ಆಧರಿಸಿ ನಟ ವಿಕ್ರಾಂತ್ ಮಾಸ್ಸೆ ಅವರ 'ದಿ ಸಬರಮತಿ ವರದಿ' ಚಲನಚಿತ್ರವನ್ನು ಶ್ಲಾಘಿಸಿ, ನಕಲಿ ನಿರೂಪಣೆಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಈ ಸತ್ಯ ಬೆಳಕಿಗೆ ಬರುತ್ತಿರುವುದು ಸಂತಸದ ಸಂಗತಿ. ನಕಲಿ ಕಥೆ ಸೀಮಿತ ಅವಧಿಯವರೆಗೆ ಮಾತ್ರ ಉಳಿಯುತ್ತದೆ ಎಂದು ಹೇಳಿದರು.
ಸಿನಿಮಾವನ್ನು ಹೊಗಳಿರುವ ಅಲೋಕ್ ಭಟ್ ಅವರ ಪೋಸ್ಟ್ ಅನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ 2002 ರ ಗೋಧ್ರಾ ಹತ್ಯಾಕಾಂಡದ ಹಿಂದಿನ ಸತ್ಯವನ್ನು ಬಹಿರಂಗಪಡಿಸುವಲ್ಲಿ ತಯಾರಕರು ಶ್ಲಾಘನೀಯ ಕೆಲಸ ಮಾಡಿದ್ದಾರೆ. ಗೋಧ್ರಾ ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 59 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ವಿಕ್ರಾಂತ್ ಮಾಸ್ಸೆ, ರಾಶಿ ಖನ್ನಾ ಮತ್ತು ರಿದ್ಧಿ ಡೋಗ್ರಾ ಅಭಿನಯದ 'ಸಬರಮತಿ ವರದಿ' ಡ್ರಾಮಾ-ಥ್ರಿಲ್ಲರ್ ಚಿತ್ರವಾಗಿದೆ. ಇದು 2002ರಲ್ಲಿ ಗುಜರಾತ್‌ನಲ್ಲಿ 59 ಜನರು ಮೃತಪಟ್ಟ ಗೋಧ್ರಾ ರೈಲು ಬೆಂಕಿಯ ಮೇಲೆ ಕೇಂದ್ರೀಕರಿಸುತ್ತದೆ. ಶುಕ್ರವಾರ (ನವೆಂಬರ್ 15) ಸಿನಿಮಾ ಬಿಡುಗಡೆಯಾಗಿದ್ದು, ಮೊದಲೆ ದಿನವೆ 1.69 ಕೋಟಿ ರೂಪಾಯಿ ಗಳಿಸಿದೆ.
ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸೆ ನಟಿಸಿದ್ದಾರೆ. ಸಿನಿಮಾ ಕುರಿತು ಮಾತನಾಡುವಾಗ ವಿಕ್ರಾಂತ್, ನನಗೆ ಬೆದರಿಕೆಗಳು ಬರುತ್ತಿವೆ. ಆದರೆ ಅದರತ್ತ ಅದರತ್ತ ಗಮನ ಹರಿಸುತ್ತಿಲ್ಲ. ಇದು ನಾನು ವ್ಯವಹರಿಸುತ್ತಿರುವ ವಿಷಯವಾಗಿದೆ ಮತ್ತು ನಾವು ತಂಡವಾಗಿ ಒಟ್ಟಾಗಿ ವ್ಯವಹರಿಸುತ್ತಿದ್ದೇವೆ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.(ಏಜೆನ್ಸೀಸ್)