PM Modi: 7 ವರ್ಷಗಳ ಬಳಿಕ ಚೀನಾಕ್ಕೆ ಭೇಟಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ನಾಳೆ (ಆ.31) ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ರ ಜತೆ ಮಾತುಕತೆ ನಡೆಸಲಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯ (SCO) ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಮೋದಿ, ಈ ಶೃಂಗಸಭೆಯ ಭಾಗವಾಗಿ ಎರಡು ದಿನಗಳ ಕಾಲ ಟಿಯಾಂಜಿನ್‌ನಲ್ಲಿ ಉಳಿಯಲಿದ್ದಾರೆ.
ಇದನ್ನೂ ಓದಿ: ಸುಂಕ ಸಮರ ಸಾಧಿಸುವ ಟ್ರಂಪ್ಗೆ ಆರೋಗ್ಯ ಸರಿಯಿಲ್ಲ! ಟ್ರೆಂಡ್ ಆಗ್ತಿರುವ ವಿಷಯವೇನು? ಹೀಗಿದೆ ವರದಿ | Trump Health
ಕ್ಸಿ ಜಿನ್‌ಪಿಂಗ್ ಜತೆಗಿನ ಭೇಟಿಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲು ಮೋದಿ ನಿರ್ಧರಿಸಿದ್ದಾರೆ. ಭಾರತದ ಮೇಲೆ ಅಮೆರಿಕ ವಿಧಿಸಿರುವ ಸುಂಕಗಳ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ಸಭೆ ಮಹತ್ವ ಪಡೆದುಕೊಂಡಿದೆ. ಟ್ರಂಪ್ ಕೂಡ ಚೀನಾದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವುದು ಗಮನಾರ್ಹ. ಈ ಸಂದರ್ಭದಲ್ಲಿ, ಭಾರತ-ಚೀನಾ ನಾಯಕರ ಭೇಟಿ ಆಸಕ್ತಿದಾಯಕವಾಗಿದೆ.
ಗಲ್ವಾನ್ ಘರ್ಷಣೆ ಮತ್ತು 2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಮಿಲಿಟರಿ ಬಿಕ್ಕಟ್ಟಿನಿಂದ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟಿತ್ತು. ಇತ್ತೀಚಿನ ಸಭೆಯು ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಸುಧಾರಿಸುವತ್ತ ಗಮನಹರಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಜಪಾನ್ ಭೇಟಿಗೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ-ಚೀನಾ ಸಂಬಂಧ ಬಹಳ ನಿರ್ಣಾಯಕವಾಗಿವೆ ಮತ್ತು ಇದು ಎರಡೂ ದೇಶಗಳ ನಡುವಿನ ಶಾಂತಿ ಮತ್ತು ಸಮೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದರು.
"ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ, ನಾನು ಇಲ್ಲಿಂದ ಟಿಯಾಂಜಿನ್‌ಗೆ SCO ಶೃಂಗಸಭೆಯಲ್ಲಿ ಭಾಗವಹಿಸಲು ತೆರಳುತ್ತೇನೆ. ಕಳೆದ ವರ್ಷ ನಾನು ಕಜಾನ್‌ನಲ್ಲಿ (ರಷ್ಯಾದಲ್ಲಿ ನಡೆದ SCO ಶೃಂಗಸಭೆಯಲ್ಲಿ) ಕ್ಸಿ ಜಿನ್ಪಿಂಗ್ರನ್ನು ಭೇಟಿಯಾಗಿದ್ದೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ನಾವು ಸ್ಥಿರ ಮತ್ತು ಸಕಾರಾತ್ಮಕ ಪ್ರಗತಿಯನ್ನು ಸಾಧಿಸಿದ್ದೇವೆ" ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಬ್ರಹ್ಮೋಸ್ ಕ್ಷಿಪಣಿಯು ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್| Brahmos Missile
"ಭಾರತ ಮತ್ತು ಚೀನಾ ಈ ಭೂಮಿಯ ಮೇಲಿನ ಎರಡು ದೊಡ್ಡ ದೇಶಗಳು. ಎರಡೂ ರಾಷ್ಟ್ರಗಳ ನಡುವಿನ ಸ್ಥಿರ ಮತ್ತು ಸ್ನೇಹಪರ ದ್ವಿಪಕ್ಷೀಯ ಸಂಬಂಧಗಳು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಸಮೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಇದು ಏಷ್ಯಾ ಹಾಗೂ ಪಂಚರಾಜ್ಯಕ್ಕೆ ಬಹಳ ನಿರ್ಣಾಯಕವಾಗಿದೆ" ಎಂದು ಮೋದಿ ನುಡಿದರು.
ಈ ಶೃಂಗಸಭೆಯ ಸಮಯದಲ್ಲಿ ಪ್ರಧಾನಿ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಟ್ರಂಪ್ರ ಸುಂಕಗಳ ಪರಿಣಾಮ, ಯುಕ್ರೇನ್‌ನೊಂದಿಗಿನ ರಷ್ಯಾದ ಸಂಘರ್ಷ ಮತ್ತು ಗಾಜಾದಲ್ಲಿನ ಪರಿಸ್ಥಿತಿಯ ಬಗ್ಗೆ ಮೋದಿ ಮತ್ತು ಪುಟಿನ್ ಚರ್ಚಿಸುವ ಸಾಧ್ಯತೆಯಿದೆ,(ಏಜೆನ್ಸೀಸ್).