ನ್ಯೂಸ್

ಉತ್ತರಾಖಂಡದಲ್ಲಿ ಆರು ಬೃಹತ್​ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

lakshmihegde

ನವದೆಹಲಿ: ಉತ್ತರಾಖಂಡದಲ್ಲಿ ನಮಾಮಿ ಗಂಗೆ ಮಿಷನ್​​ನಡಿ ಆರು ಬೃಹತ್ ಯೋಜನೆಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಲಾಲ್​ ಜೀವನ್​ ಮಿಷನ್​ ಲೋಗೋವನ್ನೂ ಉದ್ಘಾಟನೆ ಮಾಡಿದ್ದಾರೆ.

68 ಎಂಎಲ್​ಡಿ (ಮಿಲಿಯನ್​ ಲೀಟರ್ ಪರ್​ ಡೇ) ಒಳಚರಂಡಿ ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಾಣ, ಹರಿದ್ವಾರದ ಜಗಜ್ಜೀತ್​​ಪುರದಲ್ಲಿರುವ 27 ಎಂಎಲ್​ಡಿ ಸ್ಥಾವರ ನವೀಕರಣ ಮತ್ತು ಸರೈನಲ್ಲಿ 18 ಎಂಎಲ್​ಡಿ ಎಸ್​ಟಿಪಿ ನಿರ್ಮಾಣ ಸೇರಿ ಒಟ್ಟು ಆರು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಯೊಳಗಿನ ಅಪ್ರಬುದ್ಧರ ಹೇಳಿಕೆಯಿಂದ ಯಡಿಯೂರಪ್ಪನವರಿಗೆ ಸಂಕಟ: ಕಿಡಿಕಾರಿದ ಕುಮಾರಸ್ವಾಮಿ

ನಂತರ ಮಾತನಾಡಿದ ಪ್ರಧಾನಿ, ಈ ಹಿಂದೆ ಗಂಗಾ ನದಿ ಸ್ವಚ್ಛತೆಗಾಗಿ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಆದರೆ ಅವುಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಇರಲಿಲ್ಲ. ದೂರದೃಷ್ಟಿತ್ವವೂ ಇರಲಿಲ್ಲ. ಹಾಗಾಗಿ ಗಂಗಾನದಿ ಶುದ್ಧವಾಗಲೇ ಇಲ್ಲ. ಆದರೆ ನಮ್ಮ ಸರ್ಕಾರದ ನಮಾಮಿ ಗಂಗಾ ಯೋಜನೆಯಡಿ ಗಂಗಾ ಶುದ್ಧೀಕರಣ ನಡೆಯುತ್ತಿದೆ. ಸರ್ವತೋಮುಖ ಕಾರ್ಯದಿಂದ ನಮಾಮಿ ಗಂಗೆ ಮಿಷನ್​​ನಡಿ 30 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ನಾವು ನಮಾಮಿ ಗಂಗೆ ಮಿಷನ್​ನ್ನು ಕೇವಲ ಗಂಗಾ ನದಿ ಸ್ವಚ್ಛತೆಗೆ ಮಾತ್ರ ಸೀಮಿತಗೊಳಿಸಿಲ್ಲ. ದೇಶದ ಅತಿದೊಡ್ಡ ಮತ್ತು ಸಮಗ್ರ ನದಿ ಸಂರಕ್ಷಣಾ ಕಾರ್ಯಕ್ರಮವನ್ನಾಗಿ ರೂಪಿಸಿದ್ದೇವೆ ಎಂದು ಪ್ರಧಾನಿ ತಿಳಿಸಿದರು. (ಏಜೆನ್ಸೀಸ್)