ನ್ಯೂಸ್

ಗಾಂಧಿಯ ಉದಾತ್ತ ತತ್ವಗಳು ಜಾಗತಿಕವಾಗಿ ಪ್ರಸ್ತುತ; ಶಾಸ್ತ್ರಿಯ ಜೀವನ ಸ್ಫೂರ್ತಿಯ ಮೂಲ: ಪ್ರಧಾನಿ ಮೋದಿ

ನವದೆಹಲಿ (ಅ.2): ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್​ ಬಹದೂರ್​ ಶಾಸ್ತ್ರಿ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​ ಮೂಲಕ ಗೌರವ ಸಲ್ಲಿಸಿದ್ದಾರೆ.

ಗಾಂಧಿ ಜಯಂತಿಯಂದು ಗೌರವಾನ್ವಿತ ಬಾಪು ಅವರಿಗೆ ನಾನು ತಲೆಬಾಗುತ್ತೇನೆ. ಮಹಾತ್ಮ ಗಾಂಧಿಯವರ ಉದಾತ್ತ ತತ್ವಗಳು ಜಾಗತಿಕವಾಗಿ ಪ್ರಸ್ತುತವಾಗಿವೆ ಮತ್ತು ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ.

ಹಾಗೇ ಶಾಸ್ತ್ರಿಯವರ ಜೀವನ ಯಾವಾಗಲೂ ದೇಶವಾಸಿಗಳಿಗೆ ಸ್ಫೂರ್ತಿಯ ಮೂಲವಾಗಿ ಉಳಿಯುತ್ತದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)