ನವದೆಹಲಿ: ಕರೊನಾ ವಿರುದ್ಧ ಹೋರಾಡಲು ಸಾರ್ಕ್ ರಾಷ್ಟ್ರಗಳ ನಾಯಕರು ಜಂಟಿ ಕಾರ್ಯತಂತ್ರ ರೂಪಿಸಬೇಕು ಎಂದು ಪ್ರಧಾನಿ ಮೋದಿ ಶುಕ್ರವಾರ ಪ್ರಸ್ತಾಪಿಸಿದ್ದಾರೆ. ನಮ್ಮ ನಾಗರಿಕರನ್ನು ಆರೋಗ್ಯವಾಗಿಡುವ ಮಾರ್ಗಗಳನ್ನು ನಾವು ರ್ಚಚಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಸಾರ್ಕ್ ಒಕ್ಕೂಟದಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ದೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ಸದಸ್ಯ ರಾಷ್ಟ್ರಗಳಾಗಿವೆ.
ಅಮೆರಿಕ ವಿರುದ್ಧ ಚೀನಾ ಅನುಮಾನ: ಕರೊನಾ ವೈರಸನ್ನು ಅಮೆರಿಕ ವುಹಾನ್ವೈರಸ್ ಎಂದು ಕರೆದು ಚೀನಾ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಕರೊನಾಗೂ ಅಮೆರಿಕಕ್ಕೂ ಸಂಬಂಧವಿರಬಹುದು ಎಂಬ ಅನುಮಾನವನ್ನು ಚೀನಾ ವ್ಯಕ್ತಪಡಿಸಿದೆ. ಚೀನಾದಲ್ಲಿ ಸಾವಿನ ಸಂಖ್ಯೆ ಹಾಗೂ ಸೋಂಕಿನ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡುಬರುತ್ತಿದ್ದು, ಕರೊನಾ ಹುಟ್ಟಿನ ಮೂಲ ವುಹಾನ್ ಎಂಬ ಆರೋಪಗಳಿಗೆ ಚೀನಾ ತೀಕ್ಷವಾಗಿ ಪ್ರತಿಕ್ರಿಯಿಸುತ್ತಿದೆ. ಈ ಬಗ್ಗೆ ಅಮೆರಿಕ ವಿರುದ್ಧ ಆರೋಪಿಸಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಚಾವೋ ಲಿಜಿಯಾನ್, ವುಹಾನ್ಗೆ ಕರೊನಾ ಸೋಂಕನ್ನು ಅಮೆರಿಕ ಸೇನೆ ತಂದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆ: ಬೆಂಗಳೂರು, ನೊಯ್ಡಾದಲ್ಲಿನ ಕಂಪನಿಗಳ ತಲಾ ಓರ್ವ ಉದ್ಯೋಗಿ ಸೇರಿ ಭಾರತದಲ್ಲಿ ಶುಕ್ರವಾರ ಹೊಸದಾಗಿ 7 ಕರೊನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೇಜ್ರಿವಾಲ್ ಸರ್ಕಾರ, ದೆಹಲಿಯಲ್ಲಿನ ಎಲ್ಲ ಶಾಲೆಗಳು, ಸಿನಿಮಾ ಥಿಯೇಟರ್ಗಳು ಹಾಗೂ ಮಾಲ್ಗಳನ್ನು ಮಾ.31ರವರೆಗೆ ಸ್ಥಬ್ಧಗೊಳಿಸಿದೆ. ಜೆಎನ್ಯುು ಕೂಡ ತನ್ನ ಎಲ್ಲ ತರಗತಿಗಳನ್ನು ಸ್ಥಗಿತಗೊಳಿಸಿದೆ.
ಇರಾನ್ನಿಂದ 2ನೇ ತಂಡ ಆಗಮನ
ಇರಾನ್ನಲ್ಲಿ ಸಿಲುಕಿದ್ದ ಭಾರತೀಯರಲ್ಲಿ 44 ಜನರ 2ನೇ ತಂಡ ಏರ್ ಇಂಡಿಯಾ ವಿಮಾನದಲ್ಲಿ ಶುಕ್ರವಾರ ಮುಂಬೈಗೆ ಬಂದಿಳಿದಿದೆ. ಇವರನ್ನು ದೆಹಲಿ ಸಮೀಪ ಭಾರತ-ಟಿಬೆಟ್ ಗಡಿ ಪೊಲೀಸರು ನಿರ್ವಿುಸಿರುವ ಶಿಬಿರದಲ್ಲಿಟ್ಟು 14 ದಿನಗಳ ಕಾಲ ನಿಗಾವಹಿಸಲಾಗುತ್ತದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ಕಳೆದ ಶನಿವಾರ 58 ಜನರಿದ್ದ ಮೊದಲ ತಂಡವನ್ನು ಭಾರತ ರಕ್ಷಿಸಿ ಕರೆತಂದಿತ್ತು.
ಕರೊನಾಗೆ 5,000 ಜನರ ಸಾವು