Delivary boy: ಕ್ವಿಕ್ ಕಾಮರ್ಸ್ನ ಬ್ಲಿಂಕಿಟ್ನ ಡೆಲಿವರಿ ಬಾಯ್ ಓರ್ವ ವಿರಾರ್ ಪಶ್ಚಿಮದಲ್ಲಿರುವ ಸಿಡಿ ಗುರುದೇವ್ ಬಿಲ್ಡಿಂಗ್ಗೆ ಪಾರ್ಸೆಲ್ ಕೊಡಲು ಬಂದಾಗ ಅಲ್ಲಿನ ಲಿಫ್ಟ್ನಲ್ಲಿ ಮೂತ್ರ ವಿಸರ್ಜಿಸುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ಮುಂಬೈನ ಪಾಲ್ವರ್ ಜಿಲ್ಲೆಯ ವಿರಾರ್ನಲ್ಲಿರುವ ಸಿಡಿ ಗುರುದೇವ್ ಕಟ್ಟಡದಲ್ಲಿ ಶುಕ್ರವಾರ (ಜುಲೈ18) ನಡೆದಿದೆ.
ಬ್ಲಿಂಕಿಟ್ನ ಡೆಲಿವರಿ ಬಾಯ್ ಎಲಿವೇಟರ್ ಒಳಗೆ ತನ್ನ ಎಡ ಕೈಯಲ್ಲಿ ಪಾರ್ಸೆಲ್ಹಿಡಿದು ಪ್ರವೇಶಿಸುತ್ತಾನೆ. ಅವನಿಗೆ ಕ್ಯಾಮೆರಾ ಇರುವ ಸೂಕ್ಷ್ಮತೆ ತಿಳಿದಿರುವುದರಿಂದ ಆತನು ಕ್ಯಾಮೆರಾವನ್ನು ಮರೆ ಮಾಚುವ ಉದ್ದೇಶದಿಂದ, ಕ್ಯಾಮಾರಕ್ಕೆ ಬೆನ್ನು ಮಾಡಿ ತನ್ನ ಪ್ಯಾಂಟ್ನ ಜಿಪ್ ತೆಗೆದು ಲಿಫ್ಟ್ನ ಮೂಲೆಯಲ್ಲಿಯೇ ಮೂತ್ರ ಮಾಡುತ್ತಾನೆ.
ಕಟ್ಟಡ ನಿವಾಸಿಗಳು ಆ ಲಿಫ್ಟ್ನಲ್ಲಿ ಓಡಾಟ ನಡೆಸುವಾಗ ಅವರಿಗೆ ಅಹಿತಕರ ದುರ್ವಾಸನೆ ಬಂದುದರಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆನಂತರ ಬ್ಲಿಂಕಿಟ್ ಬ್ರಾಂಡ್ನ ಬಟ್ಟೆಯನ್ನು ಧರಿಸಿರುವ ವ್ಯಕ್ತಿಯನ್ನು ಗಮನಿಸಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಜೋರಾಯ್ತು ಸರಣಿ ಸಭೆಗಳ ಭರಾಟೆ
ಈ ಘಟನೆಯ ಬಳಿಕ ಅಲ್ಲಿನ ನಿವಾಸಿಗಳು ಡೆಲಿವರಿ ಬಾಯ್ ಬಗ್ಗೆ ತಿಳಿಯಲು ಹತ್ತಿರದ ಬ್ಲಿಂಕಿಟ್ ಕಚೇರಿ ಹತ್ತಿರ ಹೋಗಿ ಘರ್ಷಣೆ ಮಾಡಿದರು. ಈ ವೇಳೆ ಕೆಲವು ನಿವಾಸಿಗಳು ಆ ವ್ಯಕ್ತಿಗೆ ಹಲ್ಲೆ ನಡೆಸಿ ಪೋಲಿಸರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ:‘Digital India’ ಪರಿಣಾಮದ ಕುರಿತು ರೀಲ್ಸ್ ಮಾಡಿ ಹಣ ಗಳಿಸಿ! ಸರ್ಕಾರದಿಂದ ಸ್ಪರ್ಧೆಗೆ ಅರ್ಜಿ ಆಹ್ವಾನ..
ಈ ಘಟನೆಗೆ ಸಂಬಂಧಿಸಿದಂತೆ ನಿವಾಸಿಗಳು ಆ ವ್ಯಕ್ತಿಯ ವಿರುದ್ಧ ಬೊಲಿಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಪೊಲೀಸರು ಬ್ಲಿಂಕಿಟ್ನ ಡೆಲಿವರಿ ಬಾಯ್ನನ್ನು ವಿಚಾರಣೆ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)