ನ್ಯೂಸ್

ಸತತ 8ನೇ ದಿನವೂ ಜಿಗಿಯಿತು ಪೆಟ್ರೋಲ್​, ಡೀಸೆಲ್​

ನವದೆಹಲಿ: ಒಂದೆಡೆ ಕರೊನಾ ವೈರಸ್​ ಪ್ರಮಾಣ ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೆ, ಇದರ ಹೊಡೆತದಿಂದಾಗಿ ಪೆಟ್ರೋಲ್​ ಮತ್ತು ಡೀಸೆಲ್​ ದರವೂ ಏರಿಕೆ ಕಾಣುತ್ತಲೇ ಇದೆ.

ಕಳೆದ ಎಂಟು ದಿನಗಳಿಂದ ಸ್ವಲ್ಪ ಸ್ವಲ್ಪವೇ ದರದಲ್ಲಿ ಏರಿಕೆ ಆಗುತ್ತಿದ್ದು, ಇದೀಗ ಸತತ 8ನೇ ದಿನ ಏರಿಕೆ ಕಂಡಿದೆ. ಪೈಸೆ ಪೈಸೆಯ ಲೆಕ್ಕದಲ್ಲಿ ಏರಿಕೆ ಕಾಣುತ್ತಿದ್ದರೂ, ದಿನವೂ ಹೆಚ್ಚುತ್ತಿರುವ ಕಾರಣ, ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದು ತಿಳಿಯದೇ ವಾಹನ ಸವಾರರಲ್ಲಿ ಆತಂಕ ಹೆಚ್ಚಿಸಿದೆ.

ಇಂದು (ಭಾನುವಾರ) ಪೆಟ್ರೋಲ್ ದರದಲ್ಲಿ 62 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 64 ಪೈಸೆ ಏರಿಕೆಯಾಗಿದೆ. ಈ ಹೊಸ ದರದಿಂದಾಗಿ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ.75.78 ಹಾಗೂ ಪ್ರತಿ ಲೀಟರ್ ಡೀಸೆಲ್ ದರ ರೂ.74.03ಕ್ಕೆ ಏರಿಕೆ ಕಂಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಂಪನಿಗಳು ಅನಿವಾರ್ಯವಾಗಿ ಪೆಟ್ರೋಲ್​ ಮತ್ತು ಡೀಸೆಲ್​ ದರಗಳನ್ನು ಹೆಚ್ಚು ಮಾಡುತ್ತಿವೆ. ಇದು ಮತ್ತೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)