ಗುಜರಾತ್: ಇಲ್ಲೊಂದು ಕಡೆ ಗೋಶಾಲೆಗಾಗಿ ಹಣದ ಮಳೆಯೇ ಸುರಿದಿದೆ. ಹೀಗೆ ಲಕ್ಷಾಂತರ ರೂಪಾಯಿ ಹಣ ಗೋವುಗಳಿಗಾಗಿಯೇ ಸಂಗ್ರಹವಾಗಿದೆ. ಇಂಥದ್ದೊಂದು ಅದ್ಭುತ ಸಂಗೀತ ಕಾರ್ಯಕ್ರಮವೊಂದರಲ್ಲಿ ನಡೆದಿದೆ.
ಗುಜರಾತ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಾಯಕಿ ಊರ್ವಶಿ ರಡಾದಿಯಾ ಹಾಡುಗಾರಿಕೆಗೆ ತಲೆದೂಗಿದ ಸಂಗೀತಾಸಕ್ತರು ಮೆಚ್ಚುಗೆಯಿಂದ ನೋಟುಗಳನ್ನು ಎಸೆದಿದ್ದಲ್ಲದೆ, ತಂದು ತಂದು ಆಕೆಯ ಮೇಲೆ ಸುರಿದಿದ್ದೂ ನಡೆದಿದೆ.
ಇದನ್ನೂ ಓದಿ: ಹೃದಯಾಘಾತದಿಂದ ಸಾವಿಗೀಡಾದ ಆರನೇ ತರಗತಿ ವಿದ್ಯಾರ್ಥಿ; 23-24 ವರ್ಷದವರಿಬ್ಬರು ಕೂಡ ಹಾರ್ಟ್ ಅಟ್ಯಾಕ್ಗೆ ಬಲಿ
ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ. ಈಕೆ ಹಾರ್ಮೋನಿಯ ಹಿಡಿದು ಹಾಡಿದ್ದು, ನೆರೆದಿದ್ದವರು ನೋಟುಗಳನ್ನು ಎಸೆದು ಸಂಭ್ರಮಿಸಿದ್ದಾರೆ. ಈ ಹಣವನ್ನು ಸಂಗ್ರಹಿಸಿ ಗೋಶಾಲೆಯೊಂದಕ್ಕೆ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.