ನ್ಯೂಸ್

ಜನಹಿತ ಕಾಪಾಡೋದು ನನ್ನ ಆದ್ಯತೆ, ಬೇರೆ ಕಡೆ ಗಮನ ಇಲ್ಲ : ಬಿಎಸ್​ವೈ

rashmirhebbur

ಬೆಂಗಳೂರು : ಸಿಎಂ ಬದಲಾವಣೆಗೆ ಬಿಜೆಪಿಯ ಕೆಲ ನಾಯಕರು ಪ್ರಯತ್ನಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಿ.ಎಸ್.​​ಯಡಿಯೂರಪ್ಪ ಅವರು, ಕೋವಿಡ್ ಎದುರಿಸುವುದು ಮೊದಲ ಕೆಲಸ. ಬೇರೆ ಯಾವುದರ ಬಗ್ಗೆಯೂ ನನ್ನ ಗಮನ ಇಲ್ಲ ಎಂದಿದ್ದಾರೆ.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್​​ವೈ‌, "ಸಚಿವರು,ಶಾಸಕರು ಒಟ್ಟಾಗಿ ಕೋವಿಡ್ ಎದುರಿಸಬೇಕು. ನನ್ನ ಮುಂದೆ ಇರೋದು ಕೋವಿಡ್ ನಿರ್ವಹಣೆ ಕೆಲಸ ಮಾತ್ರ. ಕರೊನಾ ನಿಯಂತ್ರಿಸುವುದು, ಜನಹಿತ ಕಾಪಾಡೋದು ನನ್ನ ಆದ್ಯತೆ" ಎಂದರು.

ರಾಜ್ಯದ ಕೆಲವು ನಾಯಕರು ದೆಹಲಿಗೆ ಹೋಗಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಸುತ್ತಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ, "ಯಾರೋ ಒಬ್ರು ಎಲ್ಲಿಗೋ ಹೋಗಿ ಬಂದ್ರೆ ನನಗೇನು ? ಅವ್ರಿಗೆ ಉತ್ತರ ಕೊಟ್ಟು ಕಳಿಸಿದಾರಲ್ಲ" ಎಂದರು. ಶಾಸಕಾಂಗ ಪಕ್ಷದ ಸಭೆ ಬಗ್ಗೆ ಕೇಳಿದ್ದಕ್ಕೆ ಗರಂ ಆದ ಸಿಎಂ, "ಸಭೆ ಬಗ್ಗೆ ನಿಮ್ಮ ಜೊತೆ ಚರ್ಚಿಸುವ ಅಗತ್ಯ ಇಲ್ಲ" ಎಂದರು.