ನ್ಯೂಸ್

ಜನರಿಗೆ ಬಿಜೆಪಿ ಹಾಗೂ ಮೋದಿಯವರಲ್ಲಿ ವಿಶ್ವಾಸವಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ನವದೆಹಲಿ: ದೇಶದ ಜನತೆಗೆ ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸ ಇದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ರೀತಿ ಪ್ರತಿಕ್ರಿಯಿಸಿದರು.

ವಿರೋಧ ಪಕ್ಷದವರು ಕಳೆದ ಅವಧಿಯಲ್ಲೂ ಅವಿಶ್ವಾಸ ನಿರ್ಣಯ ಕೈಗೊಂಡಿದ್ದರು. ದೇಶದ ಜನತೆ ಆವಾಗಲೇ ಅವರಿಗೆ ಬುದ್ಧಿ ಕಲಿಸಿದ್ದರು ಎಂದು ಜೋಶಿ, ಜನರಿಗೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿದೆ ಎಂದರು.

ಅವಿಶ್ವಾಸ ಗೊತ್ತುವಳಿ ವಿಚಾರವಾಗಿ ನಿನ್ನೆಯೂ ಸುದ್ದಿಗಾರರ ಜತೆ ಮಾತನಾಡಿದ್ದ ಜೋಶಿ, ನಮ್ಮ ಮೊದಲ ಅವಧಿಯಲ್ಲೂ ವಿರೋಧ ಪಕ್ಷದವರು ಅವಿಶ್ವಾಸ ಮಂಡನೆಗೆ ಮುಂದಾಗಿದ್ದರು. ಆದರೆ 2019ರಲ್ಲಿ ನಮ್ಮ ಸಂಸದರ ಸಂಖ್ಯೆ 282ರಿಂದ 303ಕ್ಕೆ ಏರಿತು. ಅವರು ಬೇಕಿದ್ದರೆ ಈ ಸಲವೂ ಅವಿಶ್ವಾಸ ಮಂಡನೆಗೆ ಮುಂದಾಗಲಿ, ಈ ಬಾರಿ ನಾವು 350ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದಿದ್ದರು.