ಬೆಂಗಳೂರು: ಕಳ್ಳರೆಂದು ಭಾವಿಸಿ ಪೊಲೀಸರನ್ನು ಸಾರ್ವಜನಿಕರು ಅಟ್ಟಿಸಿಕೊಂಡು ಹೋಗಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.
ಹೊಯ್ಸಳ ವಾಹನದಲ್ಲಿದ್ದ ಪೊಲೀಸರು ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇವರು ನಿಜವಾದ ಪೊಲೀಸರಲ್ಲ, ನಕಲಿ ಪೊಲೀಸರು ಎಂದು ಆರೋಪಿಸಿ ಸಾರ್ವಜನಿಕರು ಅಟ್ಟಿಸಿಕೊಂಡು ಹೋಗಿದ್ದಾರೆ.
ಜನರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಾ ಕಳ್ಳ, ಕಳ್ಳ.. 'ಅಲ್ಲೇ ಇರ್ರಲೋ'..ಎಂದು ಜೋರಾಗಿ ಕೂಗುತ್ತ ಅಟ್ಟಾಡಿಸಿಕೊಂಡು ಹೋಗುತ್ತಿದ್ದಂತೆ ಪೊಲೀಸರು ಹೊಯ್ಸಳ ವಾಹನದೊಂದಿಗೆ ಎದ್ದೆನೋ, ಬಿದ್ದೆನೋ ಎಂದು ಪರಾರಿಯಾಗಿದ್ದಾರೆ.
ಸಾರ್ವಜನಿಕರು ಪೊಲೀಸರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.