ನ್ಯೂಸ್

VIDEO: ಹುಡುಗಿಯರನ್ನು ಕೂರಿಸಿಕೊಂಡು ಅಡ್ಡಾದಿಡ್ಡಿ ಲ್ಯಾಂಬೋರ್ಗಿನಿ ಕಾರ್ ಚಲಾಯಿಸಿದವನಿಗೆ ಜನರಿಂದ ಗೂಸಾ!

lakshmihegde

ಬೆಂಗಳೂರು: ಜತೆಯಲ್ಲಿ ಹುಡುಗಿಯರನ್ನು ಕೂರಿಸಿಕೊಂಡು ಬೆಂಗಳೂರಿನಲ್ಲಿ ಅಡ್ಡಾದಿಡ್ಡಿಯಾಗಿ ಲ್ಯಾಂಬೋರ್ಗಿನಿ ಕಾರು ಚಲಾಯಿಸುತ್ತಿದ್ದವನಿಗೆ ಸಾರ್ವಜನಿಕರೇ ಹಿಡಿದು ಗೂಸಾ ಕೊಟ್ಟಿದ್ದಾರೆ!

ಆರ್‌ಟಿ ನಗರದಲ್ಲಿ ಭಾನುವಾರ ರಸ್ತೆ ಖಾಲಿ ಇದೆಯೆಂದು ಈ ಆಸಾಮಿ ಅತಿವೇಗವಾಗಿ ಕಾರ್ ಚಲಾಯಿಸಿದ್ದ. ಒಂದು ಹಂತದಲ್ಲಿ ಕಾರು ನಿಧಾನವಾದಾಗ ಕಾರ್‌ನಲ್ಲಿದ್ದ ಈ ವ್ಯಕ್ತಿಯನ್ನು ಜನರೇ ಹೊರಗೆಗಳೆದು ಥಳಿಸಿದ್ದಾರೆ.

ಅದಲ್ಲದೆ ಆತ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸುತ್ತಿದ್ದುದು ಮತ್ತು ಜನ ಹಿಡಿದು ಥಳಿಸುತ್ತಿರುವುದನ್ನು ಸಾರ್ವಜನಿಕರೇ ವಿಡಿಯೋ ಮಾಡಿ ಬೆಂಗಳೂರು ಪೊಲೀಸರಿಗೆ ಟ್ಟಿಟರ್ ಮುಖಾಂತರ ತಲುಪಿಸಿದ್ದಾರೆ. ಈ ವಿಡಿಯೋ ನೋಡಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್ ಅವರು, ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಇದೆಂಥಾ ದೌರ್ಜನ್ಯ? ಕರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ವೈದ್ಯರ ಮೇಲೆ ಕಲ್ಲು ಬೀಸಿದ್ರು…

ಕಮಿಷನರ್ ಸೂಚನೆ ಮೇರೆಗೆ ಸಂಚಾರ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು ವಿಡಿಯೋ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದಿದ್ದೆಲ್ಲಿ, ಆತನ ಪೂರ್ವಾಪರ ಏನು ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಆನೆ ಸಾವಿನಲ್ಲಿ ಮುಸ್ಲಿಮರ ಹೆಸರು: ಪತ್ರಕರ್ತನಿಂದ ಕ್ಷಮೆಯಾಚನೆ