ನ್ಯೂಸ್

ಪ್ರಜ್ವಲ್ ರೇವಣ್ಣ ಸೋಲು ಸಂಭ್ರಮಿಸಿದ ಪೆನ್​ಡ್ರೈವ್ ಆರೋಪಿಗಳು; ನಗರದಲ್ಲಿ ಪಟಾಕಿ ಸಿಡಿಸಿ, ಡ್ಯಾನ್ಸ್​

ಹಾಸನ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಹಾಸನದಿಂದ ಸ್ಪರ್ಧಿಸಿದ್ದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, ಲೈಂಗಿಕ ದೌರ್ಜನ್ಯ ಆರೋಪದಡಿ ಇದೀಗ ಎಸ್​ಐಟಿ ಅಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ. ಇನ್ನು ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ವಿರುದ್ಧ ಕಣಕ್ಕಿಳಿದಿದ್ದ ಕಾಂಗ್ರೆಸ್​ ಅಭ್ಯರ್ಥಿ ಶ್ರೇಯಸ್​ ಪಟೇಲ್ ಭರ್ಜರಿ ಲೀಡ್​ ಪಡೆದು, ಗೆಲುವು ಸಾಧಿಸಿದ್ದಾರೆ.

ಇನ್ನು ಶ್ರೇಯಸ್​ ಪಟೇಲ್ ವಿರುದ್ಧ ಪ್ರಜ್ವಲ್ ರೇವಣ್ಣ ಸೋಲುತ್ತಿದ್ದಂತೆ ಪೆನ್​ಡ್ರೈವ್ ಆರೋಪಿಗಳಾದ ನವೀನ್ ಗೌಡ, ಚೇತನ್​ ಸೇರಿದಂತೆ ಹಲವರು ರಸ್ತೆಯಲ್ಲಿ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ದಾರೆ. ಹಾಸನದಲ್ಲಿ 17ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ, ಶ್ರೇಯಸ್ ಪಟೇಲ್ 6,32,090 ಮತಗಳನ್ನು ಪಡೆದುಕೊಂಡರೆ, ಪ್ರಜ್ವಲ್ ರೇವಣ್ಣ 5,89,829 ಮತಗಳನ್ನು ಪಡೆದಿದ್ದಾರೆ.

ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಸೋಲುತ್ತಿದ್ದಂತೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಹಾಸನದ ಸೋಲು ನಿಜಕ್ಕೂ ಅಚ್ಚರಿ ಮೂಡಿಸಿದೆ. ಇಷ್ಟು ವರ್ಷಗಳಲ್ಲಿ ಹಾಸನ ಕ್ಷೇತ್ರ ಕೈತಪ್ಪಿರಲಿಲ್ಲ, ಈ ಬಾರಿ ಕಳೆದುಕೊಂಡಿದ್ದು ಬೇಸರ ಉಂಟುಮಾಡಿದೆ ಎಂದು ಹೇಳಿದರು.