ಸಾಂದರ್ಭಿಕ ಚಿತ್ರ 
ನ್ಯೂಸ್

ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಸಿದವರಿಗೆ ತಟ್ಟಿದ ದಂಡದ‌ ಬಿಸಿ!

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಸಿದವರಿಗೆ ದಂಡದ‌ ಬಿಸಿ ಜೋರಾಗಿಯೇ ತಟ್ಟಿದೆ. ಜೂನ್‌ ತಿಂಗಳಲ್ಲಿ ಟಿಕೆಟ್‌ ರಹಿತವಾಗಿ ಪ್ರಯಾಣಿಸಿದ 2,627 ಪ್ರಯಾಣಿಕರಿಗೆ ದಂಡ ಹಾಕಲಾಗಿದೆ.

ಜೂನ್‌ ತಿಂಗಳಲ್ಲಿ 13,196 ಟ್ರಿಪ್‌ಗಳ ತಪಾಸಣೆ ನಡೆಸಲಾಗಿತ್ತು. ಆಗ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ 2,627 ಪ್ರಯಾಣಿಕರು ಪತ್ತೆಯಾಗಿದ್ದರು. ಅವರಿಂದ ₹ 5,19,060 ದಂಡ ವಸೂಲಿ ಮಾಡಲಾಯಿತು.

ಅಷ್ಟೇ ಅಲ್ಲ, ಕರ್ತವ್ಯ ಲೋಪವೆಸಗಿದ ಕಾರಣಕ್ಕಾಗಿ ಸಂಸ್ಥೆಯ 1005 ನಿರ್ವಾಹಕರ ವಿರುದ್ಧ ಪ್ರಕಣ ದಾಖಲು ಮಾಡಲಾಗಿದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿದವರಿಗೂ ದಂಡ ವಸೂಲಿ ಮಾಡಲಾಗಿದ್ದು, 328 ಪುರುಷ ಪ್ರಯಾಣಿಕರಿಗೆ ₹32,800 ದಂಡ ವಿಧಿಸಲಾಗಿದೆ.