ಶಕ್ತಿ ಯೋಜನೆಯಿಂದ ಶ್ರೀಮಂತವಾದ ದೇವಾಲಯಗಳು; ಯಾವ ದೇವಸ್ಥಾನಕ್ಕೆ ಎಷ್ಟು ಆದಾಯ ಬಂದಿದೆ?

35

ಬೆಂಗಳೂರು: ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ರಾಜ್ಯದ ತೀರ್ಥ ಕ್ಷೇತ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಇದರ ಬೆನ್ನಲ್ಲೇ ರಾಜ್ಯದ ದೇವಸ್ಥಾನಗಳಲ್ಲಿ ಆದಾಯ ಹೆಚ್ಚಳವಾಗಿದೆ. ಒಂದೇ ತಿಂಗಳಲ್ಲಿ 58 ದೇಗುಲಗಳ ಹುಂಡಿಯಲ್ಲಿ 25 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಕಳೆದ ವರ್ಷ ಜೂನ್ 11 ರವರೆಗೆ ಪ್ರತಿಷ್ಠಿತ 58 ದೇಗುಲಗಳಲ್ಲಿ ಇ- ಹುಂಡಿ ಮೂಲಕ 19 ಕೋಟಿ ಆದಾಯ ಸಂಗ್ರಹವಾಗಿತ್ತು. ಆದರೆ ಈ ವರ್ಷ ಜೂನ್ 11 ರಿಂದ ಜುಲೈ 15 ರವರೆಗೆ 24.47 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಆದಾಯದಲ್ಲಿ ಭಾರೀ ಹೆಚ್ಚಳ ಕಂಡಿದೆ.

ಇನ್ನು ಪ್ರತಿಷ್ಠಿತ ದೇವಾಲಯಗಳಲ್ಲಿ ಇ- ಹುಂಡಿಗಳನ್ನ ಮಾತ್ರ ತೆರೆದಿದ್ದು, ಮ್ಯಾನ್ಯುಯಲ್ ಹುಂಡಿಗಳನ್ನ ತೆರೆಯುವುದು ಬಾಕಿ ಇದೆ. ಅವುಗಳನ್ನು ತೆರೆದರೆ ರಾಜ್ಯದ ದೇವಾಲಯಗಳು ಇನ್ನಷ್ಟು ಶ್ರೀಮಂತವಾಗಲಿದೆ.

ಯಾವ ದೇವಸ್ಥಾನದ ಆದಾಯ ಎಷ್ಟು? (ಜೂ.11-ಜು.15 ರವರೆಗೆ)
ಕುಕ್ಕೆ ಸುಬ್ರಮಣ್ಯ ದೇವಾಲಯ
ಕಳೆದ ವರ್ಷ- 11.13 ಕೋಟಿ
ಈ ವರ್ಷ- 11.16 ಕೋಟಿ

ಮೈಸೂರಿನ ಚಾಮುಂಡೇಶ್ವರಿ
ಕಳೆದ ವರ್ಷ- 48.01 ಲಕ್ಷ
ಈ ವರ್ಷ- 3.63 ಕೋಟಿ

ಯಡಿಯೂರು ಸಿದ್ದಲಿಂಗೇಶ್ವರ
ಕಳೆದ ವರ್ಷ-1.20 ಕೋಟಿ
ಈ ವರ್ಷ-1.48 ಕೋಟಿ

ನಂಜನಗೂಡು ಶ್ರೀಕಂಠೇಶ್ವರ
ಕಳೆದ ವರ್ಷ-1.05 ಕೋಟಿ
ಈ ವರ್ಷ- 1.27 ಕೋಟಿ

ಕೊಪ್ಪಳ ಜಿಲ್ಲೆ ಹುಲಿಗೆಮ್ಮದೇವಿ
ಕಳೆದ ವರ್ಷ- 1.02 ಕೋಟಿ
ಈ ವರ್ಷ- 1.41 ಕೋಟಿ

ಬೆಂಗಳೂರು ಬನಶಂಕರಿ
ಕಳೆದ ವರ್ಷ- 65.82 ಲಕ್ಷ
ಈ ವರ್ಷ- 83.64 ಲಕ್ಷ

ದ.ಕನ್ನಡ ಮಹಾಲಿಂಗೇಶ್ವರ
ಕಳೆದ ವರ್ಷ – 43.33 ಲಕ್ಷ
ಈ ವರ್ಷ- 48.09 ಲಕ್ಷ

ಶ್ರೀರಂಗಪಟ್ಟಣ ನಿಮಿಷಾಂಬ ದೇವಾಲಯ
ಕಳೆದ ವರ್ಷ- 20.76 ಲಕ್ಷ
ಈ ವರ್ಷ- 27.98 ಲಕ್ಷ

ಕನಕಪುರದ ಕಬ್ಬಾಳಮ್ಮ
ಕಳೆದ ವರ್ಷ-13.96 ಲಕ್ಷ
ಈ ವರ್ಷ- 19.64 ಲಕ್ಷ

ಬೆಕ್ಕಿನ ಮರಿಯನ್ನು ಎದೆಗವಚಿಕೊಂಡು ತಿರುಗಾಡುತ್ತಿರುವ ಕೋತಿ…!