ನ್ಯೂಸ್

ಕುಡಿದು ಸ್ಕೂಟರ್​ ಚಲಾಯಿಸಿದ ರಾಪರ್​ಗೆ ದಂಡ ವಿಧಿಸಿದ ಕೋರ್ಟ್​​; ಮೊತ್ತ ಕೇಳಿದ್ರೆ ಶಾಕ್​​ ಆಗ್ತೀರಿ! | Suga

ಸಿಯೋಲ್: ಮದ್ಯ ಸೇವಿಸಿ ಎಲೆಕ್ಟ್ರಿಕ್​ ಸ್ಕೂಟರ್​ ಚಲಾಯಿಸಿದ್ದ ದಕ್ಷಿಣ ಕೊರಿಯಾದ ಪಾಪ್​ ತಾರೆ ಸುಗಾ(Suga)ಗೆ ನ್ಯಾಯಾಲಯವು ಅಧಿಕೃತವಾಗಿ ಶಿಕ್ಷೆ ವಿಧಿಸಿದೆ. ಸುದೀರ್ಘ ಪರಿಶೀಲನೆ ನಡೆಸಿದ ಬಳಿಕ ರಾಪರ್​ಗೆ 15 ಮಿಲಿಯನ್ ವಾನ್ (ಅಂದಾಜು $11,200 USD) ದಂಡ ವಿಧಿಸಿದೆ.

ಈ ಘಟನೆಯು 2024 ಆಗಸ್ಟ್ 6ರ ರಾತ್ರಿ ಅಪಘಾತ ನಡೆದಾಗ ಸುಗಾ ಅವರನ್ನು ಬಂಧಿಸಿದ ಪೊಲೀಸರು ಬ್ರೀತ್‌ಅಲೈಸರ್ ಪರೀಕ್ಷೆ ನಡೆಸಿದರು. ಅದರಲ್ಲಿ ಸುಗಾ ಮದ್ಯಪಾನ ಮಾಡಿರುವುದು ಕನ್ಫರ್ಮ್​​ ಆಗಿತ್ತು. ಇದರಿಂದ ಅವರ ಪರವಾನಗಿರನ್ನು ವಶಪಡಿಸಿಕೊಳ್ಳಲಾಗಿತ್ತು. ಸೆಪ್ಟೆಂಬರ್ 10ರಂದು ಸಿಯೋಲ್ ವೆಸ್ಟರ್ನ್ ಡಿಸ್ಟ್ರಿಕ್ಟ್ ಪ್ರಾಸಿಕ್ಯೂಟರ್ ಕಚೇರಿಯ ದೋಷಾರೋಪಣೆ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಈಗ ದಂಡ ವಿಧಿಸಿರುವುದು ದೃಢಪಟ್ಟಿದೆ.

ಬಿಟಿಎಸ್‌ನ ಸದಸ್ಯ ಸುಗಾ ಅವರ ನಿಜವಾದ ಹೆಸರು ಮಿನ್ ಯೂನ್-ಗಿ. ಗೀತರಚನೆಕಾರ ಹಾಗೂ ನಿರ್ಮಾಪಕರಾಗಿರುವ ಸುಗಾ ಜಾಗತಿಕವಾಗಿ ರಾಪರ್​​ ಆಗಿ ಪ್ರಸಿದ್ಧರಾಗಿದ್ದಾರೆ. ಸುಗಾ ಅವರು ಬಿಟಿಎಸ್‌ನ ಅನೇಕ ದೊಡ್ಡ ಹಿಟ್‌ಗಳಿಗೆ ಕೊಡುಗೆ ನೀಡಿದ್ದಾರೆ, "ಡೈನಮೈಟ್," "ಲೈಫ್ ಗೋಸ್ ಆನ್," ಮತ್ತು "ಬ್ಲಡ್ ಸ್ವೆಟ್ & ಟಿಯರ್ಸ್." ಅಗಸ್ಟ್ ಡಿ ಹೆಸರಿನಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.

2023ರಲ್ಲಿ ಸುಗಾ ಅವರು ತಮ್ಮ ಮಿಲಿಟರಿ ಸೇರ್ಪಡೆಯಾಗುತ್ತಿರುವುದಾಗಿ ಘೋಷಿಸಿದರು, ಎಲ್ಲಾ ಸಮರ್ಥ ಪುರುಷರಿಗೆ ದಕ್ಷಿಣ ಕೊರಿಯಾದಲ್ಲಿ ಕಡ್ಡಾಯವಾಗಿ ಮಿಲಿಟರಿ ಸೇವೆ ಮಾಡಬೇಕು. ಇದನ್ನು ಸುಗಾ ಅವರು ಅನುಸರಿಸಿದರು. ಅವರ ಸೇರ್ಪಡೆ ಸೆಪ್ಟೆಂಬರ್ 2023ರಲ್ಲಿ ಪ್ರಾರಂಭವಾಯಿತು. (ಏಜೆನ್ಸೀಸ್​​)