ನ್ಯೂಸ್

ಇದು ಸಿಂಗಲ್​ ಆಗಿರುವವರಿಂದ ಮಿಂಗಲ್ ಆಗಲು ಗ್ರೀನ್​ ಸಿಗ್ನಲ್; ಪೇರಿಂಗ್ ಆಗಲೆಂದೇ ಪಿಯರ್ ರಿಂಗ್, ಏನಿದು ಹೊಸ ಟ್ರೆಂಡ್?

ನವದೆಹಲಿ: ಯುವಪೀಳಿಗೆಯಲ್ಲಿ ಆಗಾಗ ಏನಾದರೊಂದು ಟ್ರೆಂಡ್ ಆಗುತ್ತಿರುತ್ತಿದೆ. ಇದೀಗ ಹೊಸ ಥರದ ಟ್ರೆಂಡ್​ವೊಂದು ನಡೆಯುತ್ತಿದೆ. ವಿಶೇಷವೆಂದರೆ ಇಂದು ಸಿಂಗಲ್ ಆಗಿರುವವರಿಗೆ ಮಿಂಗಲ್ ಆಗಲು ಅನುಕೂಲವಾಗಲಿ ಎಂದೇ ನಡೆಯುತ್ತಿರುವ ಟ್ರೆಂಡ್​.

ಪಿಯರ್ ರಿಂಗ್ ಎಂದು ಕರೆಯಲಾಗುವ ಈ ರಿಂಗ್ ಪೇರಿಂಗ್​ಗೆಂದೇ ಬಳಕೆ ಆಗುತ್ತಿದ್ದು, ಇದು ಟ್ರೆಂಡ್ ಆಗಿಯೂ ಪರಿಣಮಿಸಿದೆ. ಹಸಿರು ಬಣ್ಣದ ಈ ರಿಂಗ್ ಧರಿಸಿಕೊಂಡರೆ ಅದು ಸಿಂಗಲ್ ಆಗಿರುವವರಿಂದ ಮಿಂಗಲ್ ಆಗಲು ಹಸಿರು ನಿಶಾನೆ ಎಂದೇ ಪರಿಗಣಿಸಬಹುದು.

ವಿಶ್ವಾದ್ಯಂತ ಇರುವ 1.2 ಶತಲಕ್ಷ ಅವಿವಾಹಿತರು ತಾವು ಅವಿವಾಹಿತರು ಎಂದು ತೋರಿಸಲು ಬೆರಳಿಗೆ ಈ ಸಣ್ಣ ಹಸಿರು ಉಂಗುರವನ್ನು ಧರಿಸಿದರೆ, ನಮಗೆ ಡೇಟಿಂಗ್ ಅಪ್ಲಿಕೇಷನ್​ಗಳ ಅಗತ್ಯ ಬೀಳುವುದಿಲ್ಲ ಎಂದೂ ಈ ಸಂಸ್ಥೆ ಹೇಳಿಕೊಂಡಿದೆ.

ನೀವು ಈ ರಿಂಗ್ ಖರೀದಿಸಿದರೆ ನಿಮಗೆ ಪಿಯರ್​ ಫೆಸ್ಟ್​ನ ಆಹ್ವಾನ ಬರಲಿದೆ. ಅಲ್ಲದೆ ನಿಮ್ಮೂರಲ್ಲೇ ನಡೆಯುವ ವಿಶೇಷ ಕಾರ್ಯಕ್ರಮಕ್ಕೆ ಪ್ರವೇಶವೂ ಸಿಗಲಿದೆ ಎಂದು ಈ ಪಿಯರ್ ರಿಂಗ್ ತಯಾರಿಕಾ ಕಂಪನಿ ಹೇಳಿದೆ. ಆದರೆ ಈ ಕಾರ್ಯಕ್ರಮಗಳು ಯಾವಾಗ ಎಲ್ಲಿ ನಡೆಯುತ್ತವೆ, ಯಾವ್ಯಾವ ನಗರಗಳಲ್ಲಿ ನಡೆಯಲಿವೆ ಎಂಬ ಕುರಿತು ಅದು ಸ್ಪಷ್ಟ ಮಾಹಿತಿ ನೀಡಿಲ್ಲ. -ಏಜೆನ್ಸೀಸ್