ನ್ಯೂಸ್

ಡೆಪ್ಯುಟಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಪವರ್​​​​ಸ್ಟಾರ್​​ ಟೇಬಲ್​​ ಮೇಲಿತ್ತು ಆ ಪುಸ್ತಕ; ಎಲ್ಲರ ಗಮನ ಅದರತ್ತ.. ಯಾವುದು ಆ ಪುಸ್ತಕ?

ಅಮರಾವತಿ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ನಟ, ರಾಜಕಾರಣಿ ಪವನ್ ಕಲ್ಯಾಣ್ ಬುಧವಾರ ವಿಜಯವಾಡದಲ್ಲಿ ಅಧಿಕಾರ ಸ್ವೀಕರಿಸಿದರು. ವಿಜಯವಾಡದ ಶಿಬಿರ ಕಚೇರಿಯಲ್ಲಿ ವೇದಘೋಷಗಳೊಂದಿಗೆ ನಡೆದ ಸಮಾರಂಭದಲ್ಲಿ ಪವನ್ ಕಲ್ಯಾಣ್ ಅಧಿಕಾರ ವಹಿಸಿಕೊಂಡು ಕೆಲವು ಕಡತಗಳಿಗೆ ಸಹಿ ಹಾಕಿದರು. ಬಳಿಕ ಪಕ್ಷದ ಮುಖಂಡರು ಮತ್ತು ಇತರರು ಅಭಿನಂದನೆ ಸಲ್ಲಿಸಿದರು.

ಆದರೆ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಅವರ ಟೇಬಲ್ ಮೇಲಿದ್ದ ಪುಸ್ತಕವೊಂದು ಎಲ್ಲರ ಗಮನ ಸೆಳೆದಿದೆ. ಆ ಪುಸ್ತಕಕ್ಕೆ ಪವನ್ ಯಾಕೆ ಅಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ ಅಂತ ಎನ್ನುವ ಅಸಲಿ ವಿಷಯ ಹೀಗಿದೆ.

ಪವನ್​ ಕಲ್ಯಾಣ್​​​ ಅವರಿಗೆ ಪುಸ್ತಕ ಓದುವುದು, ಬರವಣಿಗೆ ಎಂದರೆ ತುಂಬಾ ಇಷ್ಟ ಎನ್ನುವುದು ಗೊತ್ತಿದೆ. ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇದೆ ಎನ್ನಲಾಗಿದೆ. ರಾಜಕೀಯಕ್ಕೆ ಬಂದ ನಂತರ ಅವರು ವಿಶೇಷವಾಗಿ ಸಾಕಷ್ಟು ಪುಸ್ತಕಗಳನ್ನು ಓದಿದ್ದಾರಂತೆ. ಆದರೆ ಪವನ್​ ಕಲ್ಯಾಣ್​ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಲೂ ಆ ಪುಸ್ತಕವನ್ನು ತಮ್ಮ ಮೇಜಿನ ಮೇಲೆ ಇಟ್ಟುಕೊಂಡಿದ್ದರು. ಇತ್ತೀಚಿಗೆ ಅವರನ್ನು ತುಂಬಾ ಕದಲಿಸಿದ ಮಹಾಗ್ರಂಥವೆಂದರೆ ಆಧುನಿಕ ಮಹಾಭಾರತ ಎಂದು ಹೇಳಲಾಗುತ್ತಿದೆ.

ಈ ಆಧುನಿಕ ಮಹಾಭಾರತ ಪುಸ್ತಕವನ್ನು ಗುಂಟೂರು ಶೇಷೇಂದ್ರ ಶರ್ಮ ಅವರು ಬರೆದಿದ್ದಾರೆ. ಆ ಪುಸ್ತಕವು ಪವನ್​ ಕಲ್ಯಾಣ್​ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ಆ ಪುಸ್ತಕವನ್ನು ಓದಿದಾಗಿನಿಂದ ಎಲ್ಲಿಗೆ ಹೋದರೂ ಅದನ್ನು ತೆಗೆದುಕೊಂಡು ಹೋಗುತ್ತಿದ್ದರು. ಇಂದಿಗೂ ಉಪಮುಖ್ಯಮಂತ್ರಿಯವರು ಆ ಪುಸ್ತಕವನ್ನು ತಮ್ಮ ಮೇಜಿನ ಮೇಲೆ ಇಟ್ಟುಕೊಂಡಿದ್ದರು. ನಾವಿಕರೇ ನಮ್ಮ ದೇಶದ ಭವಿಷ್ಯ ಎಂಬ ಮಹಾಕವಿ ಶೇಷೇಂದ್ರ ಶರ್ಮಾ ಅವರ ಮಾತು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎನ್ನುತ್ತಾರೆ ಪವನ್ ಕಲ್ಯಾಣ್. ಮೇಲಾಗಿ ಪವನ್ ಕಲ್ಯಾಣ್ ಈ ಪುಸ್ತಕವನ್ನು ಮರುಪ್ರಕಟಿಸಿದ್ದಾರೆ. (ಏಜೆನ್ಸೀಸ್​​)