ನ್ಯೂಸ್

ಸೆ.02 ಪವನ್​ ಕಲ್ಯಾಣ್​ ಜನ್ಮದಿನ; ಫ್ಯಾನ್ಸ್​ಗೆ ಸಿಗಲಿದೆ ಮೂರು ಸಿಹಿ ಸುದ್ದಿ!

ಆಂಧ್ರಪ್ರದೇಶ: ಟಾಲಿವುಡ್​ನ ಪವರ್​ ಸ್ಟಾರ್​, ನಟ ಪವನ್​ ಕಲ್ಯಾಣ್​ ಅವರ ಸಹಸ್ರಾರು ಅಭಿಮಾನಿಗಳಿಗೆ ಸೆಪ್ಟಂಬರ್​ 02 ಬಹಳ ವಿಶೇಷ ದಿನ. ಪ್ರತಿವರ್ಷವೂ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿ, ಭರ್ಜರಿ ಸಂಭ್ರಮಾಚರಣೆ ಮಾಡಲು ಕಾತರದಿಂದ ಕಾಯುವ ಫ್ಯಾನ್ಸ್​ಗೆ ಈ ವರ್ಷ ಅದ್ದೂರಿಯಾಗಿರಲಿದೆ.

ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಚಿತ್ರಗಳ ಚಿತ್ರತಂಡದಿಂದ ಹೊಸ ಮಾಹಿತಿಗಳು ಜನ್ಮದಿನದ ಉಡುಗೊರೆಯಾಗಿ ಬರಲಿದೆ. ಸುಜೀತ್ ನಿರ್ದೇಶನದ ಗ್ಯಾಂಗ್​ಸ್ಟರ್​ ಸಿನಿಮಾ ಎಂದು ಹೇಳಲಾದ 'ಓಜಿ' ಟೀಸರ್​ ಅನ್ನು ನಟನ ಹುಟ್ಟುಹಬ್ಬದಂದು ರಿಲೀಸ್​ ಮಾಡಲು ಚಿತ್ರತಂಡ ತಯಾರಾಗಿದ್ದು, ಈ ಮುಖೇನ ಅಭಿಮಾನಿಗಳ ಆಸೆಯನ್ನು ಈಡೇರಿಸಿ, ಯೂಟ್ಯೂಬ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಲು ಸಜ್ಜಾಗಿದೆ.

ಪವನ್ ಕಲ್ಯಾಣ್​ ಅಭಿನಯದ 'ಹರಿಹರ ವೀರ ಮಲ್ಲು' ಚಿತ್ರದ ತಯಾರಕರು ನಟನ ಅದ್ಭುತ ಮತ್ತು ಬೃಹತ್ ಪೋಸ್ಟರ್ ಅನ್ನು ಸೆ.02ರ 12:17ಕ್ಕೆ ಅನಾವರಣಗೊಳಿಸಲಿದ್ದಾರೆ. ಈ ಬಗ್ಗೆ ಪವರ್​ ಸ್ಟಾರ್​ ಅಭಿಮಾನಿಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಇದರ ಬೆನ್ನಲ್ಲೇ 'ಉಸ್ತಾದ್ ಭಗತ್ ಸಿಂಗ್' ಚಿತ್ರತಂಡ ಕೂಡ ಹೊಚ್ಚ ಹೊಸ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಮೂಲಕ ಪವನ್​ ಕಲ್ಯಾಣ್ ಜನ್ಮದಿನಕ್ಕೆ ಫ್ಯಾನ್ಸ್​ಗೆ ಮೂರು ಸಿಹಿ ಸುದ್ದಿಯನ್ನು ಆಯಾ ಸಿನಿಮಾ ತಂಡಗಳು ನೀಡಲು ಸಜ್ಜಾಗಿರುವುದು ವಿಶೇಷ,(ಏಜೆನ್ಸೀಸ್).