ನ್ಯೂಸ್

ಮುಖ ಮುಚ್ಚಿಕೊಂಡೆ ದರ್ಶನ್​ ಜತೆ ಪೊಲೀಸ್​ ವ್ಯಾನ್​ ಹತ್ತಿದ ಪವಿತ್ರಾ ಗೌಡ!

ಮೋಹನ್​ ಶೆಟ್ಟಿ

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ ಸೇರಿದಂತೆ 13 ಆರೋಪಿಗಳನ್ನು ಇದೀಗ ಮತ್ತೆ ಐದು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಕಳಿಸಲಾಗಿದ್ದು, ಜೂನ್ 20ರವರೆಗೂ ಕಸ್ಟಡಿಯಲು ಇರಿಸುವಂತೆ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ನಟ ದರ್ಶನ್ ಮತ್ತು ಗ್ಯಾಂಗ್​ ಅನ್ನು ಪೊಲೀಸರ ಸರ್ಪಗಾವಲಿನಲ್ಲಿ ಕೋರ್ಟ್​ನಿಂದ ಹೊರೆಗೆ ಕರೆದುಕೊಂಡು ಬರುವ ವೇಳೆ ದರ್ಶನ್​ ಮುಂದೆಯೇ ಬಂದ ಆರೋಪಿ ಪವಿತ್ರಾ ಗೌಡ, ಮಾಧ್ಯಮಗಳ ಕ್ಯಾಮರಾಗಳು ತನ್ನನ್ನು ಸೆರೆಹಿಡಿಯುತ್ತಿರುವುದನ್ನು ಗಮನಿಸಿ, ಮುಖವನ್ನು ದುಪ್ಪಟ್ಟದಿಂದ ಮರೆಮಾಚಿಕೊಂಡು ಪೊಲೀಸ್​ ವ್ಯಾನ್ ಹತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.