ನ್ಯೂಸ್

VIDEO| ನೋಡ ನೋಡುತ್ತಿದ್ದಂತೆ ಬಡಿದಾಡಿಕೊಂಡ ಪ್ರಯಾಣಿಕರು; ಕಾರಣ ನಿಗೂಢ ಎಂದ ಪೊಲೀಸರು

ಚಿಕಾಗೊ: ವಿಮಾನ ನಿಲ್ದಾಣದ ಬ್ಯಾಗೇಜ್​ ಕೌಂಟರ್​ ಬಳಿ ನೋಡ ನೋಡುತ್ತಿದ್ದಂತೆ ಪ್ರಯಾಣಿಕರ ಹೊಡೆದಾಡಿಕೊಂಡಿರುವ ಘಟನೆ ಚಿಕಾಗೋದ ಓ ಹರೆ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಘಟನೆಯವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಕಂಡು ಬಂದಿರುವ ಹಾಗೆ ಪ್ರಯಾಣಿಕರು ಒಬ್ಬರನ್ನೊಬ್ಬರು ಕಪಾಳಮೋಕ್ಷ ಮಾಡುತ್ತಿರುವುದು, ಕೂದಲನ್ನು ಎಳದುಕೊಂಡು ಬಡಿದಾಡುತ್ತಿರುವುದು ಕಂಡು ಬರುತ್ತದೆ.

ವಿಮಾನ ನಿಲ್ದಾಣದ ಟರ್ಮಿನಲ್​ 3ರಲ್ಲಿ ಘಟನೆ ನಡೆದಿದ್ದು ಬ್ಯಾಗೇಜ್ ಕೌಂಟರ್​ ಬಳಿ ಪ್ರಯಾಣಿಕರು ಹೊಡೆದಾಡಿಕೊಂಡಿದ್ದಾರೆ. ಆದರೆ, ಜಗಳಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.