ನವದೆಹಲಿ: ಗುಜರಾತಿನ ಜಾಮ್ನಗರ ಮೂಲದ ಆಯುರ್ವೇದ ಇನ್ಸ್ಟಿಟ್ಯೂಟ್ಸ್ಗಳಿಗೆ ರಾಷ್ಟ್ರೀಯ ಸ್ಥಾನಮಾನ ನೀಡುವ ಮಸೂದೆಯನ್ನು ಬುಧವಾರ ಸಂಸತ್ತು ಅಂಗೀಕರಿಸಿದೆ. "ದ ಇನ್ಸ್ಟಿಟ್ಯೂಟ್ ಆಫ್ ಟೀಚಿಂಗ್ ಆ್ಯಂಡ್ ರೀಸರ್ಚ್ ಇನ್ ಆಯುರ್ವೇದ ಬಿಲ್ 2020" ಎಂಬ ಹೆಸರಿನ ಮಸೂದೆಯನ್ನು ರಾಜ್ಯಸಭೆ ಧ್ವನಿಮತದೊಂದಿಗೆ ಅಂಗೀಕರಿಸಿದೆ.
ಲೋಕಸಭೆಯಲ್ಲಿ ಈ ಮಸೂದೆ ಕಳೆದ ಅಧಿವೇಶನದಲ್ಲೇ ಅಂಗೀಕೃತವಾಗಿತ್ತು. ಇನ್ಸ್ಟಿಟ್ಯೂಠ್ ಆಫ್ ಪೋಸ್ಟ್ ಗ್ರಾಜುವೇಟ್ ಟೀಚಿಂಗ್ ಆ್ಯಂಡ್ ರಿಸರ್ಚ್ ಇನ್ ಆಯುರ್ವೇದ, ಗುಲಾಬ್ಕನ್ವೇರಬಾ ಆಯುರ್ವೇದ ಮಹಾವಿದ್ಯಾಲಯ, ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಫಾರ್ಮಾಸ್ಯೂಟಿಕಲ್ ಸೈನ್ಸಸ್ ಎಂಬ ಮೂರು ಸಂಸ್ಥೆಗಳಿಗೆ ಈ ಮೂಲಕ ರಾಷ್ಟ್ರೀಯ ಸ್ಥಾನಮಾನ ಪಡೆಯಲಿವೆ.
ಆಯುರ್ವೇದ ಅತ್ಯಂತ ಪುರಾತನ ವೈದ್ಯಪದ್ಧತಿಯಾಗಿದ್ದು, ಸಾಂಪ್ರದಾಯಿಕ ಪರಂಪರೆಯನ್ನೂ ಹೊಂದಿದೆ. ಆತ್ಮನಿರ್ಭರ ಭಾರತ ಯೋಜನೆ ಪ್ರಕಾರ ಔಷಧೀಯ ಸಸ್ಯಗಳನ್ನು ಬೆಳೆಸುವುದಕ್ಕೆ, ಕೃಷಿಕರಿಗೆ ನೆರವಾಗುವುದಕ್ಕೆ ಕೇಂದ್ರ ಸರ್ಕಾರ 4,000 ಕೋಟಿ ರೂಪಾಯಿಯನ್ನು ಇದಕ್ಕಾಗಿ ಮೀಸಲಿಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. (ಏಜೆನ್ಸೀಸ್)