ನ್ಯೂಸ್

ಸಿಎ ತಿದ್ದುಪಡಿ, ದೆಹಲಿ ಪಾಲಿಕೆ ವಿಲೀನ ಮಸೂದೆಗೆ ಅಸ್ತು; ಕಾರ್ಪೊರೇಟ್​ ಗವರ್ನೆನ್ಸ್​ಗೆ ಬಲ ಎಂದ ಸರ್ಕಾರ ಪ್ರತಿಪಕ್ಷಗಳ ವಿರೋಧ

ನವದೆಹಲಿ: ಕಾರ್ಪೊರೇಟ್​ ಗವರ್ನೆನ್ಸ್​ನ ಮೂರು ಆಧಾರ ಸ್ತಂಭಗಳಾದ ಚಾರ್ಟರ್ಡ್ ಅಕೌಂಟನ್ಸಿ, ಕಾಸ್ಟ್ ಅಕೌಂಟನ್ಸಿ, ಕಂಪನಿ ಸೆಕ್ರಟರಿಗಳ ನೇಮಕದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಲು ಅನುಕೂಲವಾಗುವಂತೆ ಮಂಡಿಸಲಾದ ಸಿಎ ಮಸೂದೆಗೆ ಮೇಲೆ ರಾಜ್ಯಸಭೆಯಲ್ಲಿ ಸುಮಾರು ಎರಡೂವರೆ ತಾಸು ಚರ್ಚೆ ನಡೆದು ಧ್ವನಿಮತದಿಂದ ಅಂಗೀಕಾರ ಆಯಿತು. ದೆಹಲಿಯ ಮೂರೂ ನಗರಪಾಲಿಕೆಗಳ ವಿಲೀನಗೊಳಿಸುವ ಮಸೂದೆ ಯನ್ನೂ ಧ್ವನಿಮತದ ಮೂಲಕ ಅನಮೋದಿಸಲಾಯಿತು. ಈ ಎರಡೂ ಮಸೂದೆಗಳಿಗೆ ಲೋಕಸಭೆಯಲ್ಲಿ ಕಳೆದವಾರ ಒಪ್ಪಿಗೆ ಸಿಕ್ಕಿತ್ತು.

ಕಾಂಗ್ರೆಸ್, ಟಿಎಂಸಿ, ಡಿಎಂಕೆ, ವೈಎಸ್​ಆರ್​ಸಿಪಿ ಸದಸ್ಯರು, ಚಾರ್ಟರ್ಡ್ ಅಕೌಂಟಂಟ್ಸ್, ದ ಕಾಸ್ಟ್ ಆಂಡ್ ವರ್ಕ್ಸ್ ಅಕೌಂಟಂಟ್ಸ್ ಆಂಡ್ ಕಂಪನಿ ಸೆಕ್ರಟರೀಸ್ (ಅಮೆಂಡಮೆಂಟ್) ಬಿಲ್ 2022’ ವೃತ್ತಿಪರ ಸ್ವಾಯತ್ತೆ ಮೇಲಿನ ತೀವ್ರತರದ ದಾಳಿ ಎಂದು ಆರೋಪಿಸಿದರು. ಕಾಂಗ್ರೆಸ್ ಸದಸ್ಯ ಎಲ್. ಹನುಮಂತಯ್ಯ ಮಸೂದೆಯಲ್ಲಿರುವ ಲೋಪವನ್ನು ಪ್ರಸ್ತಾಪಿಸಿ ಸರಿಪಡಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಡಬ್ಲ್ಯುಎಂಡಿ ಮಸೂದೆ ಮಂಡನೆ: ವೆಪನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್ ಆಂಡ್ ದೆಯರ್ ಡೆಲಿವರಿ ಸಿಸ್ಟಮ್್ಸ (ಪ್ರೊಹಿಬಿಷನ್​ ಆಫ್ ಅನ್​ಲಾಫುಲ್ ಆಕ್ಟಿವಿಟೀಸ್) ಅಮೆಂಡಮೆಂಟ್ ಬಿಲ್ 2022 ಅನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಲೋಕಸಭೆ ಯಲ್ಲಿ ಮಂಗಳವಾರ ಮಂಡಿಸಿದರು. ಸಮೂಹ ನಾಶಕ ಅಸ್ತ್ರಗಳಿಗೆ ಹಣ ಹೂಡಿಕೆಯನ್ನು ಇದು ನಿಷೇಧಿಸುತ್ತದೆ. ಅಲ್ಲದೆ, ಅಂತಹ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳ, ಸಂಸ್ಥೆಗಳ ಹಣಕಾಸು ಸಂಪನ್ಮೂಲ, ಆಸ್ತಿಗಳನ್ನು ವಶಪಡಿಸುವ, ಅಧಿಕಾರವನ್ನು ಸರ್ಕಾರಕ್ಕೆ ನೀಡುತ್ತದೆ.

ಪೆಟ್ರೋಲ್, ಡೀಸೆಲ್, ಎಲ್​ಪಿಜಿ, ಪಿಎನ್​ಜಿ ಮತ್ತು ಔಷಧಗಳ ಬೆಲೆ ಏರುತ್ತಲೇ ಇದೆ. ಇದರ ಬಗ್ಗೆ ಚರ್ಚೆ ಮಾಡೋಣ ಎಂದು ವಿಪಕ್ಷ ಸದಸ್ಯರು ನಿತ್ಯವೂ ಮನವಿ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಅವಕಾಶ ನೀಡದಿದ್ದರೆ ಮತ್ತೆಲ್ಲಿ ಮಾತನಾಡಬೇಕು? | ಮಲ್ಲಿಕಾರ್ಜುನ ಖರ್ಗೆ ವಿರೋಧ ಪಕ್ಷದ ನಾಯಕ ರಷ್ಯಾ-ಯೂಕ್ರೇನ್ ಸಮರ ಶುರುವಾದ ನಂತರ ಇಂಧನ ದರ ಏರಿಕೆ ಆಗತೊಡಗಿದೆ. ಅಭಿವೃದ್ಧಿ ಹೊಂದಿದ ಕೆಲವು ದೇಶಗಳಲ್ಲಿ ಶೇಕಡ 50ರಷ್ಟು ಬೆಲೆ ಏರಿದರೆ ಭಾರತದಲ್ಲಿ ಕೇವಲ ಶೇಕಡ 5 ಬೆಲೆ ಏರಿಕೆ ಆಗಿದೆ. | ಹರ್ದೀಪ್ ಸಿಂಗ್ ಪುರಿ ಪೆಟ್ರೋಲಿಯಂ ಸಚಿವ

ಸಂಸತ್​ಗೆ ಸರ್ಕಾರದ ಮಾಹಿತಿ

  • ಮೋದಿ ಪ್ರಧಾನಿಯಾದ ಮೇಲೆ ದೇಶದ ಒಂದಿಂಚು ನೆಲ ಅನ್ಯದೇಶದ ಪಾಲಾಗಿಲ್ಲ.
  • ಭಾರತದಲ್ಲಿ ಅವಧಿ ಮೀರಿ 3.93 ಲಕ್ಷ ವಿದೇಶೀಯರು ವಾಸವಿದ್ದಾರೆ.
  • ಕಳೆದ ಏಳು ವರ್ಷಗಳ ಅವಧಿಯಲ್ಲಿ ಸಿಎಸ್​ಆರ್ ಫಂಡ್​ನ 1.25 ಲಕ್ಷ ಕೋಟಿ ರೂಪಾಯಿನಲ್ಲಿ ಶೇಕಡ 4-5 ಮಾತ್ರ ಪಿಎಂ ಕೇರ್ಸ್ ನಿಧಿಗೆ ಸಲ್ಲಿಕೆಯಾಗಿದೆ.
  • ದೇಶದಲ್ಲಿ 2017ರಿಂದೀಚೆಗೆ ಸರ್ಕಾರಕ್ಕೆ ಸಂಬಂಧಿಸಿದ 641 ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್ ಆಗಿದ್ದವು.
  • ಭಾರತದಲ್ಲಿ ಪ್ರಸ್ತುತ ಪ್ರತಿ ಸಾವಿರ ಜನರಿಗೆ 1.96 ಪ್ರಮಾಣದ ನರ್ಸ್ ಅನುಪಾತವಿದೆ .
  • ಅರುಣಾಚಲ ಪ್ರದೇಶ ಚೀನಾ ಗಡಿ ಭಾಗದಲ್ಲಿ ಮೂಲಸೌಕರ್ಯ ವೃದ್ಧಿಗಾಗಿ ಆರು ಪಟ್ಟು ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿದೆ
  • ಒಂದು ಕೋಟಿಗೂ ಹೆಚ್ಚು ತೆರಿಗೆದಾರರು 8.40 ಲಕ್ಷ ಕೋಟಿ ರೂ. ಕರವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಎಲ್​ಐಸಿಯಲ್ಲಿ 21 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತ ಕ್ಲೈಮ್ ಆಗಿಲ್ಲ.